

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ `ರೋಟರಿ ಕ್ಲಬ್ ಧಾರವಾಡ'ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜು. 3ರಂದು ಸಂಜೆ 6.30ಕ್ಕೆ ಜರುಗಲಿದೆ. ಅಧ್ಯಕ್ಷರಾಗಿ ಪಿ.ಕೆ. ನಂದ್ಯಾಳಕರ, ಕಾರ್ಯದರ್ಶಿಯಾಗಿ ಶೋಭಾ ಪಾಟೀಲ, ಖಜಾಂಚಿಯಾಗಿ ಅರವಿಂದ ದೇಶಮುಖ್ ಅಽಕಾರ ವಹಿಸಿಕೊಳ್ಳುವರು. ಪಿಡಿಜಿ ರೊಟೇರಿಯನ್ ಅವಿನಾಶ ಪೋತದಾರ್ ಹಾಗೂ ಅಸಿಸ್ಟಂಟ್ ಗವರ್ನರ್ ರೊಟೇರಿಯನ್ ಹರ್ಷಕುಮಾರ ತುರಮರಿ ಪದಗ್ರಹಣ ಅಽಕಾರಿಗಳಾಗಿ ಪಾಲ್ಗೊಳ್ಳುವರು. ನಿರ್ಗಮಿತ ಪದಾಧಿಕಾರಿಗಳಾದ ಲಕ್ಷ್ಮೀಕಾಂತ ನಾಯಕ್, ಅಶೋಕ ನಾಗಸಮುದ್ರ ಹಾಗೂ ಪಿಡಿಜಿಗಳಾದ ರಾಜನ್ ದೇಶಪಾಂಡೆ, ರವಿ ದೇಶಪಾಂಡೆ ಹಾಗೂ ರೊಟೇರಿಯನ್‌ಗಳು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.