

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಗಂಗಾ ಶಂಕರ ಕಮಫರ್ಟ್ ಹಾಲ್‌ನಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಫಿನಿಕ್ಸ್ ಎಂಬ ಹೊಸ ಕ್ಲಬ್ ಉದ್ಘಾಟಿಸಲಾಯಿತು.
ಸಂತೋಷ್ ಪೂಜಾರಿ (ಅಧ್ಯಕ್ಷ), ಡಾ. ಅಮಿತ್ ಬ್ಯಾಟ್ನಾಲ್ (ಕಾರ್ಯದರ್ಶಿ), ಜಾಸ್ಮಿನ್ ಥಾಮಸ್ (ಖಜಾಂಚಿ) ಅಧಿಕಾರ ವಹಿಸಿಕೊಂಡರು. ಮುಖ್ಯ ಅತಿಥಿಯಾಗಿ ಆಗಮಿಸಿದ 2024-25ರ ಜಿಲ್ಲಾ ಗವರ್ನರ್ ಶರದ್ ಪೈ ಹೊಸ ಕ್ಲಬ್ ಸ್ಥಾಪಿಸಿದರು.
ಅರ್ಹರಿಗೆ ಬ್ಲಾಂಕೆಟ್ ವಿತರಿಸಲಾಯಿತು. ಮಾಜಿ ಜಿಲ್ಲಾ ಗವರ್ನರ್ ಮಹೇಶ್ ರಾಯ್ಕರ್ ಕ್ಲಬ್‌ನ ಧ್ವಜ ಬಿಡುಗಡೆ ಮಾಡಿದರು. 22 ಸದಸ್ಯರನ್ನು ಕ್ಲಬ್‌ಗೆ ಸೇರಿಸಲಾಯಿತು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಈ ಕಾರ್ಯಕ್ರಮ ಪ್ರಾಯೋಜಿಸಿತ್ತು. 2024-25ರಲ್ಲಿ ರಿತು ಸರಾಫ್ ಅಧ್ಯಕ್ಷರಾಗಿ ಮತ್ತು ರವಿ ಮೂಲಿಮನಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.
ಸಹಾಯಕ ಗವರ್ನರ್ ಸುನಿಲ್ ಮಿರಾಜ್ಕರ್, ಕ್ಲಬ್‌ನ ಜಿಎಸ್‌ಆರ್ ಅನೀಸ್ ಖೋಜೆ, ಕ್ರಿಯಾಯೋಜನೆ ಚೇರ್ಮನ್ ವಾಸುಕಿ ಸಂಜಿ, ಅನ್ನಪೂರ್ಣಾ ಸಾಲಿ, ಜಯಾ ಜಾಧವ, ಮಂಜುನಾಥ ಹೊಂಬಳ ಭಾಗವಹಿಸಿದ್ದರು.
ಪ್ರಾಸಿಲ್ಲಾ ಥಾಮಸ್ ನಿರೂಪಿಸಿದರು. ಡಾ. ಅಮಿತ ಆರ್. ಬೈತ್ನಾಳ ವಂದಿಸಿದರು.