ಪದಗ್ರಹಣ ಸಮಾರಂಭ ಜು. 13ರಂದು

Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಇದರ 2025-26 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 13ರಂದು ಸಂಜೆ 7 ಗಂಟೆಗೆ ಗೋಕುಲ ರಸ್ತೆ ವಿಮಾನ ನಿಲ್ದಾಣ ಎದುರಿನ ಹೊಟೇಲ ಫಾರ್ಚೂನ್​ನಲ್ಲಿ ಏರ್ಪಡಿಸಲಾಗಿದೆ.

ಕ್ಲಬ್​ನ ನೂತನ ಅಧ್ಯಕ್ಷರಾಗಿ ಕಿರಣ ಹೆಬಸೂರ, ಕಾರ್ಯದರ್ಶಿ ರಿಶಿ ತಿವಾರಿ, ಖಜಾಂಚಿ ಪವನ ಸರಾಫ್ ಆಯ್ಕೆಯಾಗಿದ್ದಾರೆ. ಮುಖ್ಯ ಅತಿಥಿಗಳಾಗಿ ಆಗಮಿಸುವ ಡಿಸ್ಟ್ರಿಕ್ಟ್ ಗವರ್ನರ್ ಅರುಣ ಭಂಡಾರಿ ಪ್ರತಿಜ್ಞಾವಿಧಿ ಬೋಧಿಸುವರು. ಅಸಿಸ್ಟಂಟ್ ಗವರ್ನರ್ ಮಡಿವಾಳಪ್ಪಾ ಜುಂಜನ್ನವರ ಪಾಲ್ಗೊಳ್ಳುವರು ಎಂದು ರೋಟರಿ ಜಿಲ್ಲಾ ಕಾರ್ಯದರ್ಶಿ (ಸಂಪಾದಕರ ತಂಡ) ಮಂಜುನಾಥ ಹೊಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net