

ವಿಜಯವಾಣಿ ಸುದ್ದಿಜಾಲ ಧಾರವಾಡ
`ರೋಟರಿ ಕ್ಲಬ್ ಆಫ್ ಧಾರವಾಡ'ದ 2025- 26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಪಿ.ಕೆ. ನಂದ್ಯಾಳಕರ, ಕಾರ್ಯದರ್ಶಿಯಾಗಿ ಶೋಭಾ ಪಾಟೀಲ, ಖಜಾಂಚಿಯಾಗಿ ಅರವಿಂದ ದೇಶಮುಖ್ ಅಧಿಕಾರ ವಹಿಸಿಕೊಂಡರು. ಪಿಡಿಜಿ ರೊಟೇರಿಯನ್ ಅವಿನಾಶ ಪೋದ್ದಾರ್ ಪದಗ್ರಹಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಹಾಯಕ ಗವರ್ನರ್ ಹರ್ಷಕುಮಾರ ತುರಮರಿ ಅತಿಥಿಯಾಗಿ ಪಾಲ್ಗೊಂಡಿದ್ದರು.
ರೊಟೇರಿಯನ್‌ಗಳಾದ ಲಕ್ಷ್ಮೀಕಾಂತ ನಾಯಕ್, ಅಶೋಕ ನಾಗಸಮುದ್ರ, ಡಾ. ಎಸ್.ಟಿ. ನಂದಿಬೇವೂರ, ಅಶ್ವಿನಿಕುಮಾರ ಘರ್ಗಿ, ಸುನೀತ ಪುರೋಹಿತ್, ಇತರರಿದ್ದರು.