ರೋಟರಿ ಕ್ಲಬ್ ಸೆಂಟ್ರಲ್ ನಿಂದ ನೇತೃತ್ವ

Published on

ಹುಬ್ಬಳ್ಳಿ: ಇಲ್ಲಿಯ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ನೇತೃತ್ವ 25 ಡಿಸ್ಟ್ರಿಕ್ಟ್ ಇಂಟರ್ಯಾಕ್ಟ್ ಲೀಡರ್ ಶಿಪ್ ಫೋರಂ ಅನ್ನು ಆ. 3ರಂದು ಬೆಳಗ್ಗೆ 9.30ಕ್ಕೆ ವಿದ್ಯಾನಗರದ ಕೆಎಲ್ಇ ಟೆಕ್ ವಿವಿ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.

ಇಂಟರ್ಯಾಕ್ಟ್ ಇದು 12ರಿಂದ 18 ವರ್ಷ ಒಳಗಿನ ವಿದ್ಯಾರ್ಥಿಗಳಿಗೆ ಇರುವ ರೋಟರಿ ಇಂಟರನ್ಯಾಷನಲ್ ಇದರ ಭಾಗವಾಗಿದೆ. ಎಲ್ಲ ಇಂಟರ್ಯಾಕ್ಟ್ ಕ್ಲಬ್ ಗಳು ಸ್ಥಳಿಯ ರೋಟರಿ ಕ್ಲಬ್ ಅಡಿಯಲ್ಲಿ ಬರುತ್ತವೆ.

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಕೌಶಲ, ಸಮಾಜಕ್ಕೆ ಸೇವೆ ನೀಡುವುದು, ವಿಶ್ವ ಭ್ರಾತೃತ್ವ ಎಲ್ಲೆಡೆ ಪಸರಿಸುವ ಉದ್ದೇಶ ಹೊಂದಲಾಗಿದೆ. ನೇತೃತ್ವದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗುವರು.

ಮುಖ್ಯ ಅತಿಥಿಯಾಗಿ ಐಸಿಎಂಆರ್ ನ ಡಾ. ಶಿವಾಜಿ ಜಾಧವ, ಹಿಂದಿನ ಜಿಲ್ಲಾ ಗವರ್ನರ್ ಅವಿನಾಶ ಪೋತದಾರ, ಅರುಣ ಭಂಡಾರೆ ಪಾಲ್ಗೊಳ್ಳುವರು. ವಾಸುಕು ಸಂಜಿ, ಗೌರಿ ಶಿರಗಾಂವಕರ, ಕೌಸ್ತುಭ ಸಂಶೀಕರ ಇತರರು ವಿವಿಧ ವಿಷಯಗಳ ಮೇಲೆ ಮಾತನಾಡುವರು ಎಂದು ರೋಟರಿ ಕ್ಲಬ್ ಅಧ್ಯಕ್ಷೆ ಅಂಜನಾ ಬಸನಗೌಡರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net