ರೋಟರಿ ಕ್ಲಬ್ ಹುಬ್ಬಳ್ಳಿ ಎಲೈಟ್ ಪದಗ್ರಹಣ

Anis khoje
Published on

ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಜು. 23ರಂದು ಸಂಜೆ 4 ಗಂಟೆಗೆ ರೋಟರಿ ಕ್ಲಬ್ ಆಫ್ ಎಲೈಟ್‌ನ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿದೆ.

ಅಧ್ಯಕ್ಷರಾಗಿ ಅನೀಸ್ ಖೋಜೆ, ಕಾರ್ಯದರ್ಶಿಯಾಗಿ ಅಮಿತ ಸರಾಫ್, ಖಜಾಂಚಿಯಾಗಿ ರೀತು ಸರಾಫ್ ಹಾಗೂ ಇತರ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆ. ಪಿಡಿಜಿ ಆನಂದ ಕುಲಕರ್ಣಿ ಪ್ರತಿಜ್ಞಾ ವಿಧಿ ಬೊಧಿಸುವರು.

ಮುಖ್ಯ ಅತಿಥಿಯಾಗಿ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ, ಸಹಾಯಕ ಗವರ್ನರ್ ಬಿನೊಯ್ ಮೊಮಯ್ಯ, ಕ್ಲಬ್ ಜಿಎಸ್‌ಆರ್ ದೀಪಕ ಪಾಟೀಲ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net