ದಾಂಡೇಲಿ ರೋಟರಿ ಕ್ಲಬ್​ನಿಂದ ಶಾಲೆಗಳಿಗೆ 241 ಬೆಂಚ್ ವಿತರಣೆ

DND BENCH VITARANE
Published on

ದಾಂಡೇಲಿ: ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ವಿವಿಧ ಸ್ತರಗಳಲ್ಲಿ ರೋಟರಿ ಸಂಸ್ಥೆ ಕೊಡುಗೆ ಹಾಗೂ ಸೇವೆ ಸಲ್ಲಿಸುತ್ತಿದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಶರದ್ ಪೈ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರೋಟರಿ ಕ್ಲಬ್ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ರೋಟರಿ ಕ್ಲಬ್​ನ ಜಿಲ್ಲಾ ಸಹಾಯಕ ಪ್ರಾಂತಪಾಲ ಡಾ.ಆನಂದ ತಾವರಗೆರೆ ಮಾತನಾಡಿ, ರೋಟರಿ ಸಂಸ್ಥೆ ಸ್ಪಷ್ಟ್ಟ ಉದ್ದೇಶವನ್ನಿಟ್ಟುಕೊಂಡು ಸದೃಢ ಸಮಾಜ ನಿರ್ವಣಕ್ಕೆ ತನ್ನನ್ನು ತಾನು ತೊಡಗಿಸಿಕೊಂಡ ಸಂಸ್ಥೆಯಾಗಿದೆ. ದಾಂಡೇಲಿ ರೋಟರಿ ಕ್ಲಬ್​ನ ಸೇವಾ ಮನೋಭಾವ ಶ್ಲಾಘಿಸಿದರು.

ರೋಟರಿ ಕ್ಲಬ್ ವತಿಯಿಂದ ನಗರದ ಮೂರು ಅನುದಾನಿತ ಶಾಲೆಗಳಿಗೆ ಅಂದಾಜು 8 ಲಕ್ಷ ರೂ.ಗಳ ಸಹಾಯಧನದಡಿ ರೋಟರಿ ಶಾಲೆಗೆ 51, ಕನ್ಯಾ ವಿದ್ಯಾಲಯಕ್ಕೆ 20 ಮತ್ತು ಜನತಾ ವಿದ್ಯಾಲಯಕ್ಕೆ 170 ಒಟ್ಟು 241 ಡೆಸ್ಕ್​ಗಳನ್ನು ವಿತರಿಸಲಾಯಿತು.

ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಪಾಟೀಲ, ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ, ಪ್ರಧಾನ ಕಾರ್ಯದರ್ಶಿ ಅಶುತೋಷ್ ರೈ, ಖಜಾಂಚಿ ಲಿಯೋ ಪಿಂಟೋ, ರೋಟರಿ ಕ್ಲಬ್ ಪ್ರಮುಖ ಎಚ್.ವೈ. ಮೇರ್ವಾಡೆ, ಪ್ರಕಾಶ ಶೆಟ್ಟಿ, ಆರ್.ಪಿ. ನಾಯ್ಕ, ಸುಧಾಕರ ಶೆಟ್ಟಿ, ಎಸ್.ಜಿ. ಬೀರಾದಾರ, ಪಿ.ವಿ. ಹೆಗಡೆ, ಇಮಾಮ್ ಸರ್ವರ, ನಾಗೇಶ ನಾಯ್ಕವಾಡಿ, ಡಾ. ಎಸ್.ಎನ್. ದಫೇದಾರ್, ಡಾ.ಅನೂಪ್ ಮಾಡ್ಕೊಳ್ಳರ, ಶೇಖರ ಪೂಜಾರಿ, ಪರಶುರಾಮ ಸಾಂಬ್ರೇಕರ, ಝೇವಿಯರ್ಡಿ ಸಿಲ್ವಾ, ಸುಮಿತ್ ಅಗ್ನಿಹೋತ್ರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net