ರೋಟರಿ ಮಿಡ್ ಟೌನ್ ನಿಂದ ಮಕ್ಕಳ ದಿನಾಚರಣೆ

Published on

ಹುಬ್ಬಳ್ಳಿ: ಇಲ್ಲಿಯ ರೋಟರಿ ಮಿಡ್ ಟೌನ್ ಎಜ್ಯುಕೇಶನ್ ಹಾಗೂ ವೆಲ್ ಫೇರ್ ಸೊಸೈಟಿ ವತಿಯಿಂದ ಸಂಸ್ಥೆಯ ಸರಸ್ವತಿ ವಿದ್ಯಾಲಯದಲ್ಲಿ ಗುರುವಾರ ಮಕ್ಕಳ ದಿನ ಆಚರಿಸಲಾಯಿತು.

ಇಂದಿರಾ ಉಮಚಗಿ ಅವರಿಂದ ತರಬೇತಿ ಪಡೆದು ಇತ್ತೀಚೆಗೆ ಏರ್ಪಡಿಸಿದ್ದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.

ಸಮೃದ್ಧ ಚವಟೆ, ಶ್ರದ್ಧಾ ಪವಾರ, ಶ್ರೀನಿಧಿ ಚವಟೆ, ತರುನಾ ಜಾಧವ, ವರುಣ ಜಾಧವ, ಧ್ಯಾನ ಕಾಂಬಳೆ ಅವರನ್ನು ಸನ್ಮಾನ ಮಾಡಲಾಯಿತು. ಡಾ. ಆಯೇಷಾ ಗುಲ್ಜಾರ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.

ಮಕ್ಕಳಿಗೆ ಚಿತ್ರಕಲೆ, ನೃತ್ಯ, ಗಾಯನ ಸ್ಪರ್ಧೆಗಳನ್ನು ನಡೆಸಲಾಯಿತು. ರೋಟರಿ ಕ್ಲಬ್‌ನ ದಿನೇಶ ಶೆಟ್ಟಿ, ಸೊಸೈಟಿ ಅಧ್ಯಕ್ಷ ಲಿಂಗರಾಜ ಪಾಟೀಲ, ರೋಟರಿ ಸದಸ್ಯರಾದ ಪ್ರವಿಣ ಬನ್ಸಾಲಿ, ವಾಸುಕಿ ಸಂಜೀವ, ಕೌಸ್ತುಭ ಸಂಶೀಕರ, ವಿವೇಕ ನಾಯಕ, ಮುಖ್ಯಾಧ್ಯಾಪಕಿ ಕೀರ್ತಿ ದೇಶಪಾಂಡೆ, ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net