ಉಚಿತ ರಕ್ತ ಗುಂಪು ತಪಾಸಣಾ ಶಿಬಿರ

23GDG08
ಗದಗ ರೋಟರಿ ಸೆಂಟ್ರಲ್​ ಕ್ಲಬ್​ ವತಿಯಿಂದ ಗಂಗಿಮಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಕ್ತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಆರ್​. ಎಸ್​. ಬುರಡಿ, ವಿಜಯಕುಮಾರ ಹಿರೇಮಠ, ಡಾ. ದತ್ತಾತ್ರೇಯ ವೈಕುಂಠೆ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಇತಿಹಾಸ, ಕಲೆ ಮತ್ತು ಸಂಸತಿಯ ಪರಂಪರೆಯು ರಾಷ್ಟ್ರದ ಹಿರಿಮೆಯನ್ನು ಸಂಕೇತಿಸುತ್ತದೆ. ಇಂತಹ ಭವ್ಯ ಪರಂಪರೆಯನ್ನು ಉಳಿಸವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದು ಆರ್​. ಎಸ್​. ಬುರಡಿ ಹೇಳಿದರು.
ರೋಟರಿ ಸೆಂಟ್ರಲ್​ ಕ್ಲಬ್​ ವತಿಯಿಂದ ಗಂಗಿಮಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಂಪರೆ ದಿನ ಹಾಗೂ ವಿದ್ಯಾಥಿರ್ಗಳಿಗೆ ಉಚಿತ ರಕ್ತ ಗುಂಪು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಇತಿಹಾಸವನ್ನು ಅರಿತಿರಬೇಕು. ಇತಿಹಾಸ ತಿಳಿದವರು ಮಾತ್ರ ಇತಿಹಾಸ ನಿಮಿರ್ಸಲು ಸಾಧ್ಯ. ಸಂಸತಿ, ಇತಿಹಾಸ, ಪರಂಪರೆಯನ್ನು ತಿಳಿದುಕೊಂಡಿರಬೇಕು ಎಂದರು.
ರೋಟರಿ ಸೆಂಟ್ರಲ್​ ಕ್ಲಬ್​ ಅಧ್ಯ ವಿಜಯಕುಮಾರ ಹಿರೇಮಠ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ತಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ತಿಳಿಯುವದು ಅವಶ್ಯ. ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರಕ್ತದ ಗುಂಪು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ರಕ್ತ ತಪಾಸಿಗ ಡಾ. ದತ್ತಾತ್ರೇಯ ವೈಕುಂಠೆ ಮಾತನಾಡಿ, ಎಲ್ಲರೂ ತಮ್ಮ ರಕ್ತ ಗುಂಪಿನ ಬಗ್ಗೆ ತಿಳಿದಿರುವದು ಎಷ್ಟು ಅವಶ್ಯವೋ ರಕ್ತದಾನ ಮಾಡುವುದೋ ಅಷ್ಟೇ ಅವಶ್ಯವಿದೆ. ಆರೋಗ್ಯದ ಸಮತೋಲನ ಕಾಯ್ದುಕೊಳ್ಳುವ ದೃಷ್ಠಿಯಿಂದ 18 ವರ್ಷ ಮೇಲ್ಪಟ್ಟವರು ವರ್ಷದಲ್ಲಿ ಕನಿಷ್ಠ 2 ಸಲ ರಕ್ತದಾನ ಮಾಡಬೇಕು ಎಂದರು.
ಡಾ. ದತ್ತಾತ್ರೇಯ ವೈಕುಂಠೆ ಅವರನ್ನು ರೋಟರಿ ಸೆಂಟ್ರಲ್​ ಕ್ಲಬ್​ ವತಿಯಿಂದ ಸನ್ಮಾನಿಸಲಾಯಿತು. 440 ವಿದ್ಯಾಥಿರ್ಗಳ ರಕ್ತಗುಂಪು ತಪಾಸಣೆ ನಡೆಸಿ ಚೀಟಿ ವಿತರಿಸಲಾಯಿತು.
ಆರ್​. ಬಿ. ಸಂಕಣ್ಣವರ, ಕೆ.ಎಸ್​.ಬೇಲೇರಿ, ಸುನೀಲ್​ ಕಬಾಡಿ, ಡಿ. ಎಸ್​. ಮಿಶೇನವರ, ಎಸ್​. ಜಿ. ಗಿರಿತಮ್ಮನವರ, ವಿ. ಆರ್​. ಹಾಂಶಿ, ಸಿ. ಎಸ್​. ಬೆಳಹಾರ, ಜೆ. ಡಿ. ಕಬ್ಬೇರಳ್ಳಿ, ಆರ್​. ಡಿ. ಮಗಜಿ, ಆರ್​. ಬಿ. ಹಾದಿಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net