ಶ್ರೀರಾಮ ಕೋಲ್ಟ್ ತಂಡಕ್ಕೆ ರೋಟರಿ ಚಾಂಪಿಯನ್ ಪ್ರಶಸ್ತಿ

New Shree Ram New
Published on

ಹುಬ್ಬಳ್ಳಿ : ಇಲ್ಲಿನ ರೋಟರಿ ಕ್ಲ್ಲ್ ಆಫ್ ಹುಬ್ಬಳ್ಳಿ ಮಿಡ್​ಟೌನ್ ಆಯೋಜಿಸಿದ್ದ ರೋಟರಿ ಚಾಂಪಿಯನ್ಸ್ ಲೀಗ್- 2024 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಕೊಲ್ಲಾಪುರದ ಶ್ರೀರಾಮ ಕೋಲ್ಟ್  ಹೊರಹೊಮ್ಮಿದೆ.

ಕಳೆದ ಶನಿವಾರ ಮತ್ತು ಭಾನುವಾರದಂದು ಬಿಡಿಕೆ ಮೈದಾನದಲ್ಲಿ ಏರ್ಪಡಿಸಿದ್ದ ಚಾಂಪಿಯನ್ಸ್ ಲೀಗ್​ನಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರದ 6 ತಂಡಗಳು ಸೆಣಸಾಡಿದವು.

ಪ್ರಥಮ ಸೆಮಿಫೈನಲ್​ನಲ್ಲಿ ಎಸ್​ಪಿ ಟೈಗರ್ ತಂಡವನ್ನು ಶ್ರೀರಾಮ ಕೋಲ್ಟ್  ತಂಡವು 15 ರನ್​ಗಳಿಂದ ಸೋಲಿಸಿ ಫೈನಲ್​ಗೆ ಪ್ರವೇಶಿಸಿತು. ಎರಡನೇ ಸೆಮಿಫೈನಲ್​ನಲ್ಲಿ ಸ್ಯಾನಿ ಸ್ಮ್ಯಾಶರ್ ತಂಡದ ವಿರುದ್ಧ ಕೊಂಕಣ ವಾರಿಯರ್ಸ್ ತಂಡ 6 ವಿಕೆಟ್​ಗಳಿಂದ ಜಯಶಾಲಿ ಆಯಿತು.

ಫೈನಲ್​ನಲ್ಲಿ ಕೊಂಕಣ ವಾರಿಯರ್ಸ್ ವಿರುದ್ಧ ಶ್ರೀರಾಮ ಕೋಲ್ಟ್  5 ವಿಕೆಟ್​ಗಳಿಂದ ಜಯಿಸಿ ಚಾಂಪಿಯನ್ ಆಯಿತು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿದ್ದ ವಿಜಯ ಹೊತ್ತಿಹೊಳಿ, ಸುಮೇರ ಓಸ್ವಾಲ್, ನಾಗರಾಜ ಶೆಟ್ಟಿ, ಸಂಜನಾ ಮಹೇಶ್ವರಿ ಬಹುಮಾನ ವಿತರಣೆ ಮಾಡಿದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಸಂಯೋಜಕ ರಾಹುಲ ವಿಕಮಸಿ ಹಾಗೂ ಕ್ಲಬ್​ನ ಸದಸ್ಯರು ಉಪಸ್ಥಿತರಿದ್ದರು. ವಾಸುಕಿ ಸಂಚಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net