ರೋಟರಿಯಿಂದ ನಾಯಕತ್ವ ಗುಣ

rotary midtown
Published on

ಹುಬ್ಬಳ್ಳಿ: ರೋಟರಿ ಇಂಟರ್ಯಾಕ್ಟ್ ಫೋರಮ್ ಮೂಲಕ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದಲ್ಲದೆ ಭವಿಷ್ಯದಲ್ಲಿ ವಿದ್ಯಾಭ್ಯಾಸದ ಹೊರತಾಗಿಯೂ ಸಮಾಜ ಸೇವೆ ಮಾಡಲು ಉತ್ಸುಕರಾಗುವುದರಲ್ಲಿ ಸಂಶಯವಿಲ್ಲ ಎಂದು ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ನಾಸೀರ ಬೋರಸಡವಾಲಾ ಹೇಳಿದರು.

ಹುಬ್ಬಳ್ಳಿಯಲ್ಲಿ ರೋಟರಿ ಕ್ಲಬ್ ಆಫ್ ಮಿಡ್​ಟೌನ್ ವತಿಯಿಂದ ಆಯೋಜಿಸಿದ್ದ ಡಿಸ್ಟ್ರಿಕ್ಟ್ ಇಂಟರ್ಯಾಕ್ಟ್ ಲೀಡರ್​ಶಿಪ್ ಫೋರಮ್ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಇಂಟರ್ಯಾಕ್ಟ್ ಕ್ಲಬ್​ನ ಸೂರ್ಯಕಾಂತ ಆಕಳವಾಡಿ ಡಿಸ್ಟ್ರಿಕ್ ಇಂಟರ್ಯಾಕ್ಟ್ ರಿಪ್ರೆಸೆಂಟಿಟಿವ್ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಡಿಸ್ಟ್ರಿಕ್ ಇಂಟರ್ಯಾಕ್ಟ್ ಕಮಿಟಿ ಚೇರ್ಮನ್ ಡಾ. ಪಲ್ಲವಿ ದೇಶಪಾಂಡೆ, ಇಂಟರ್ಯಾಕ್ಟರ್​ಗಳು ಕೈಗೆತ್ತಿಕೊಳ್ಳಬಹುದಾದ ಯೋಜನೆಗಳ ಬಗ್ಗೆ ವಿವರಿಸಿದರು. ವಿಶ್ರಾಂತ ಕುಲಪತಿ ಡಾ. ಮೀನಾ ಚಂದಾವರಕರ ಮಾತನಾಡಿದರು.

ರೋಟರಿ ಕ್ಲಬ್ ಆಫ್ ಮಿಡ್​ಟೌನ್ ಅಧ್ಯಕ್ಷ ರಾಜು ದೊಡಮನಿ ಸ್ವಾಗತಿಸಿದರು. ಕೌಸ್ತುಭ ಸಂಶೀಕರ ಫೋರಮ್ ಬಗ್ಗೆ ವಿವರಣೆ ನೀಡಿದರು. ಕಾರ್ಯದರ್ಶಿ ಶಿವಪ್ರಸಾದ ಲಕಮನಹಳ್ಳಿ ವಂದಿಸಿದರು. ಗೋವಾ ರಾಜ್ಯ, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಆಯ್ದ ಭಾಗಗಳಿಂದ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net