ರೋಟರಿ ಬೆಳಗಾವಿ ಮ್ಯಾರಥಾನ್‌: ಪ್ರಲ್ಹಾದ, ಜಸ್ಮಿತಾಗೆ ಪ್ರಶಸ್ತಿ

Screenshot_2025-02-17-19-37-08-67.jpg
Published on

ಬೆಳಗಾವಿ: ರೋಟರಿ ಕ್ಲಬ್‌ ಆಫ್‌ ವೇಣುಗ್ರಾಮ–ಬೆಲಗಮ್‌ ವತಿಯಿಂದ ನಗರದಲ್ಲಿ ಭಾನುವಾರ 14ನೇ ಆವೃತ್ತಿಯ ‘ರೋಟರಿ ಬೆಳಗಾವಿ ಮ್ಯಾರಥಾನ್‌’ ನಡೆಯಿತು.

ಪುರುಷರ ಮುಕ್ತ ವಿಭಾಗದ 42.195 ಕಿ.ಮೀ ಮ್ಯಾರಥಾನ್‌ನಲ್ಲಿ ಖಾನಾಪುರದ ಎಲೈಟ್ ರನ್ನಿಂಗ್ ಅಕಾಡೆಮಿಯ ಪ್ರಹ್ಲಾದ ನಾಯಕ ಗೆದ್ದರೆ, ಮಹಿಳೆಯರ ಮುಕ್ತ ವಿಭಾಗದ 42.195 ಕಿ.ಮೀ ಮ್ಯಾರಥಾನ್‌ನಲ್ಲಿ ಮಂಗಳೂರಿನ ಜಸ್ಮಿತಾ ಕೆ. ಚಾಂಪಿಯನ್‌ ಆದರು.

21.975 ಕಿ.ಮೀ, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಫನ್‌ ರನ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆದವು. 3 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಸಂಭ್ರಮಿಸಿದರು. ಬೆಂಗಳೂರಿನ 92 ವರ್ಷದ ಓಟಗಾರ ಬೈಲಹಳ್ಳಿ ರಘುನಾಥ್ ಜನಾರ್ದನ ಅವರು, 21.975 ಕಿ.ಮೀ ಕ್ರಮಿಸಿದ್ದು ವಿಶೇಷವಾಗಿತ್ತು

ಮರಾಠ ಲಘುಪದಾತಿ ದಳದ ಕೇಂದ್ರದ ಕಮಾಂಡೆಂಟ್‌ ಬ್ರಿಗೇಡಿಯರ್‌ ಜಾಯ್‌ದೀಪ ಮುಖರ್ಜಿ ಮತ್ತು ಕ್ಲಬ್‌ ಅಧ್ಯಕ್ಷ ವಿನಯಕುಮಾರ ಬಾಳಿಕಾಯಿ ಮ್ಯಾರಥಾನ್‌ಗೆ ಚಾಲನೆ ಕೊಟ್ಟರು.

ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಲ್ಲಿಕಾರ್ಜುನ ಮುರಗುಡೆ, ಕಪಿಲ ಕಾಲಭೈರವ, ಉಮೇಶ ರಾಮಗುರವಾಡಿ, ಮಹೇಶ ಅನಗೋಳಕರ, ಲೋಕೇಶ ಹಾನಗಲ್ಲ, ಡಾ.ರವಿ ಪಾಟೀಲ, ಶರತ ಪೈ, ಶಿವರಾಮಕೃಷ್ಣನ್‌, ವಿಜಯಕಾಂತ ಸಿದ್ನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net