ಅವಕಾಶಗಳ ಸಮರ್ಪಕ ಬಳಕೆ :ರೋಟರಿ ಜಿಲ್ಲಾ ನಿಕಟಪೂರ್ವ ಸಹಾಯಕ ಗವರ್ನರ್ ಡಾ.ಸಂದೀಪ ಶೆಟ್ಟಿ ಆಶಯ

rotary
ರೋಟರಿ ಸಮುದಾಯ ಭವನದಲ್ಲಿ ಮಂಗಳವಾರ ರೋಟರಿ ವಾರ್ಷಿಕ ಕುಟುಂಬ ಸಮ್ಮಿಲನದಲ್ಲಿ ಜಿಲ್ಲಾ ರೋಟರಿ ನಿಕಟಪೂರ್ವ ಸಹಾಯಕ ಗವರ್ನರ್ ಡಾ.ಸಂದೀಪ ಶೆಟ್ಟಿ, ನಿಕಟಪೂರ್ವ ವಲಯ ಸೇನಾನಿ ರಂಜಿತ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಪಾಲಿಗೆ ಬಂದ ಕರ್ತವ್ಯಗಳನ್ನು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ನಿಭಾಯಿಸಿದಾಗ ಸಾಧನೆಯ ಮೆಟ್ಟಿಲೇರಬಹುದು. ಅವಕಾಶಗಳು ದೊರೆತಾಗ ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಮಾಡಿದ ಕಾರ್ಯಗಳಲ್ಲಿ ಯಶಸ್ಸು ಕಾಣಬಹುದು ಎಂದು ರೋಟರಿ ಜಿಲ್ಲಾ ನಿಕಟಪೂರ್ವ ಸಹಾಯಕ ಗವರ್ನರ್ ಡಾ.ಸಂದೀಪ ಶೆಟ್ಟಿ ಹೇಳಿದರು.

ರೋಟರಿ ಸಮುದಾಯ ಭವನದಲ್ಲಿ ಮಂಗಳವಾರ ರೋಟರಿ ವಾರ್ಷಿಕ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಜ್ಜನರ ಸಹವಾಸದಿಂದ ಉತ್ತಮ ಗುಣ ಪಡೆಯುತ್ತೇವೆ. ಮಾಡುವ ಕೆಲಸ ಒಳ್ಳೆಯದಾಗಿರಬೇಕು. ನಾವು ಮಾಡುವ ಕಾಯಕದಿಂದ ಬೇರೆಯವರಿಗೆ ತೊಂದರೆ ಆಗಬಾರದು ಎಂಬ ಅಂಶವನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಹಾಯಕ ಗವರ್ನರ್ ಡಾ.ಸಂದೀಪ ಶೆಟ್ಟಿ ಹಾಗೂ ನಿಕಟಪೂರ್ವ ವಲಯ ಸೇನಾನಿ ರಂಜಿತ್‌ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸದಸ್ಯರು ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ವಾರ್ಷಿಕ ವರದಿ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net