ರೋಟರಿ ಅನ್ನೋತ್ಸವದಲ್ಲಿ ಜನಸಾಗರ

07Jaggu3-web
ಬೆಳಗಾವಿ ನಗರದ ಸಿಪಿಇಡಿ ಮೈದಾನದಲ್ಲಿ ಆಯೋಜಿಸಿರುವ ಅನ್ನೋತ್ಸವದಲ್ಲಿ ಪಾಲ್ಗೊಂಡಿದ್ದ ಜನ.
Published on

ಬೆಳಗಾವಿ: ನಗರದ ಸಿಪಿಇಡಿ ಮೈದಾನದಲ್ಲಿ ಆಯೋಜಿಸಿರುವ ರೋಟರಿ ಅನ್ನೋತ್ಸವದಲ್ಲಿ ಬೆಳಗಾವಿ ಮತ್ತು ಸುತ್ತಮುತ್ತಲಿನ ಆಹಾರ ಪ್ರಿಯರು ಭಾನುವಾರ ಉತ್ಸಾಹದಿಂದ ಪಾಲ್ಗೊಂಡರು.

ಅರಿಜಿತ್ ಸಿಂಗ್ ಅವರ ಜನಪ್ರಿಯ ಹಾಡುಗಳನ್ನು ಆನಂದಿಸುತ್ತ ವಿವಿಧ ಸ್ಟಾಲ್‌ಗಳಲ್ಲಿ ವೈವಿಧ್ಯಮಯ ಆಹಾರ ಸವಿದರು. ಸಸ್ಯಾಹಾರಿ ಆಹಾರ ವಿಭಾಗದಲ್ಲಿ ಸ್ಟಾಲ್ ಸಂಖ್ಯೆ 9ರಲ್ಲಿ ಮನಾಲಿಯ ವಿಶೇಷ ಹಿಮಾಚಲ ಶಡ್ಡು ಮತ್ತು ಮೊಮೊಗಳು ಹೈಲೈಟ್ ಆಗಿದ್ದವು. ಆದರೆ, ಮಾಂಸಾಹಾರ ವಿಭಾಗದಲ್ಲಿ ದೆಹಲಿಯ ಲಾಹೋರ್ ಗೇಟ್‌ನಲ್ಲಿರುವ ‘ನಿಜಾಮ’ ಸ್ಟಾಲ್‌ನಲ್ಲಿ ಸ್ಟಾಲ್ ನಂ.4ರಲ್ಲಿ ಲಭ್ಯವಿದ್ದ ಚಿಕನ್ ಚಾಂಗೇಶಿ ಮತ್ತು ತಿಲವಾಲಿ ತಂದೂರಿ ರೋಟಿ ಗ್ರಾಹಕರ ಬಾಯಿಯಲ್ಲಿ ನೀರೂರಿಸಿದವು. ಇದರೊಂದಿಗೆ ಅಮ್ಯೂಸ್‌ಮೆಂಟ್ ಪಾರ್ಕ್, ವಿವಿಧ ಬಗೆಯ ಪಾದರಕ್ಷೆಗಳು, ಸಿದ್ಧ ಉಡುಪುಗಳ ಮಳಿಗೆಗಳಿಗೂ ಹಲವರು ಭೇಟಿ ನೀಡಿದರು. ಗ್ರಾಹಕರ ಅನುಕೂಲಕ್ಕಾಗಿ ವಾಹನಗಳ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜ.14ರ ವರೆಗೆ ಪ್ರತಿದಿನ ಸಂಜೆ 5 ರಿಂದ ರಾತ್ರಿ 10ರ ವರೆಗೆ ನಡೆಯಲಿರುವ ಈ ಆಹಾರೋತ್ಸವದಲ್ಲಿ ನಗರದ ಜನರು ಭಾಗವಹಿಸುವಂತೆ ರೋಟರಿ ಕ್ಲಬ್ ಕೋರಿದೆ.

ಇಂದಿನ ವಿಶೇಷತೆ: ಜ.8ರಂದು ‘ಬಾಲಿವುಡ್ ಹಿಟ್ಸ್’ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅನ್ನೋತ್ಸವ ಮತ್ತು ಇತರ ಕಾರ್ಯಕ್ರಮಗಳಿಂದ ಬಂದ ಹಣವನ್ನು ರೋಟರಿ ಕ್ಲಬ್ ಸಾಮಾಜಿಕ ಕಾರ್ಯಗಳಿಗೆ ಖರ್ಚು ಮಾಡುತ್ತದೆ. ಸಾಮಾಜಿಕ ಹೊಣೆಗಾರಿಕೆ ಯಶಸ್ವಿಯಾಗಿ ಮುಂದುವರಿಸಲು ರೋಟರಿ ಸದಸ್ಯರು ಶ್ರಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net