

ಕುಶಾಲನಗರ:
ಕೂಡಿಗೆಯಲ್ಲಿರುವ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಮನು ಪೆಮ್ಮಯ್ಯ ಸೋಮವಾರ ವನಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತಾನಾಡಿ ಗಿಡ ಮರಗಳ ಸಂರಕ್ಷಣೆ ನಮ್ಮೆಲ್ಲರ ಪ್ರಮುಖ ಜವಾಬ್ದಾರಿ. ಇವುಗಳ ಸಂರಕ್ಷಣೆ ಬಗ್ಗೆ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿ ಮೈಗೂಡಿಸಿಕೊಂಡರೆ ಆರೋಗ್ಯಕರವಾದ ಬದುಕಿಗೆ ಅನುಕೂಲವಾಗುತ್ತದೆ ಎಂದರು.
ಶಾಲೆ ವ್ಯವಸ್ಥಾಪಕ ಬೋಸ್ ಮೊಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷ ಎಸ್. ಕೆ. ಸತೀಶ್, ಶೋಭಾ ಸತೀಶ್, ಉಲ್ಲಾಸ್ ಕೃಷ್ಣ, ಸುನಿತಾ ಮಹೇಶ್, ರುದ್ರೇಶ್ ಪಟೇಲ್, ಚಂದ್ರಶೇಖರ್, ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳಾದ ಅಪ್ಪಣ್ಣ, ಅರುಣ್ ಕುಮಾರ್, ವಿಜಯ ಶಾಲಾ ಮುಖ್ಯೋಪಾಧ್ಯಾಯನಿ ಪುಷ್ಪ ಮತ್ತಿತರರು ಇದ್ದರು.