ಗೋಣಿಕೊಪ್ಪಲು ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

rotary
Published on

ಗೋಣಿಕೊಪ್ಪಲು:

ಗೋಣಿಕೊಪ್ಪಲು ರೋಟರಿ ಕ್ಲಬ್‌ನ 25ನೇ ಆಡಳಿತ ಅಧ್ಯಕ್ಷರಾಗಿ ಪಿ.ಆರ್. ವಿಜಯನ್, ಕಾರ್ಯದರ್ಶಿಯಾಗಿ ಪ್ರಮೋದ್ ಕಾಮತ್ ಮಂಗಳವಾರ ಜವಾಬ್ದಾರಿ ವಹಿಸಿಕೊಂಡರು.

ಅಧಿಕಾರ ಅನುಷ್ಠಾಪನ ಅಧಿಕಾರಿಯಾಗಿ ಸತೀಶ್ ಬೋಳಾರ್, ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು ಸಂಘಟನೆಯ ಬಲವರ್ಧನೆ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ತುಡಿತಗಳಿಗೆ ಸ್ಪಂದಿಸಿ ಮಾದರಿಯಾಗುವ ನಿಟ್ಟಿನಲ್ಲಿ ಜವಾಬ್ದಾರಿತವಾಗಿ ಆಡಳಿತ ಅಧಿಕಾರಿ ಅವಧಿಯನ್ನು ಪೂರ್ಣಗೊಳಿಸಬೇಕು ಎಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಯಾವುದೇ ಫಲಪೇಕ್ಷಗಳಿಲ್ಲದೆ ಜನಸಾಮಾನ್ಯರಡೆಗೆ ತಲುಪುವ ಕಾರ್ಯಗಳನ್ನು ಹಮ್ಮಿಕೊಂಡು ಆರೋಗ್ಯಪೂರ್ಣ ಸಮಾಜವನ್ನು ಕಟ್ಟಬೇಕು. ಕೊಡಗಿನ ಮಣ್ಣಿಗೆ ಇಲ್ಲಿನ ಆಚಾರ, ವಿಚಾರ ಮಹಿಳೆಯರ ಸಾಕ್ಷರತೆಗಳು ಗಮನ ಸೆಳೆಯುತ್ತದೆ. ಇಂತಹ ನೆಲದಲ್ಲಿ ಮಾನವೀಯತೆ ಮೌಲ್ಯದಲ್ಲಿ ಕಾರ್ಯನಿರ್ವಹಿಸುವುದು ಪುಣ್ಯದ ಕೆಲಸ ಎಂದು ಹೇಳಿದರು.

ವಲಯ ಅಧಿಕಾರಿ ವಿಲನ್‌ಚಂಗಪ್ಪ, ಕೆ.ಹೆಚ್. ಆದಿತ್ಯ ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ಸುಮಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ 10ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ರೋಟರಿ ಸಂಸ್ಥೆಯ ನೂತನ ಉಪಾಧ್ಯಕ್ಷ ಎಂ.ಎA. ರಮೇಶ್, ಕೋಶಾಧಿಕಾರಿ ಜಪ್ಪೆಕೊಡಿ ಸುಭಾಷಿಣಿ, ಕಾರ್ಯಕ್ರಮ ಸಂಚಾಲಕ ಚಂಗಪ್ಪ, ನಿರ್ದೇಶಕರುಗಳಾಗಿ ಎಂ.ಕೆ. ಮಾಚಯ್ಯ, ಡಾ. ಚಂದ್ರಶೇಖರ್, ಕೆ.ಬಿ. ನವೀನ್, ಬಿ.ಎ. ದೇಚಮ್ಮ, ಎಂ.ಕೆ. ದೀನ, ಪಿ.ಬಿ.ಪೂಣಚ್ಚ., ಎಂ.ಜಿ. ಮೋಹನ್ ಟಿ.ವಿ. ನರೇಂದ್ರ, ಕೆ.ಜಿ. ರಾಜೀವ, ಪಿ.ಜಿ. ರಾಜಶೇಖರ್, ಸಜನ್ ಚಂಗಪ್ಪ, ಸುಷ್ಮಾ ಚಂಗಪ್ಪ, ಪವಿತ್ರ, ಸರಿನಾ ರಾಜೀವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net