

ಮಡಿಕೇರಿ: ಮೂರ್ನಾಡು ಪ.ಪೂ.ಕಾಲೇಜಿನ ರೋಟರ‌್ಯಾಕ್ಟ್‌ನ ನಿಕಟಪೂರ್ವ ಅಧ್ಯಕ್ಷೆ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋಟರ‌್ಯಾಕ್ಟ್ ನವರತ್ನ-೨೦೨೩ ಎಂಬ ಪ್ರಶಸ್ತಿ ದೊರಕಿದೆ.
ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ರೋಟರ‌್ಯಾಕ್ಟ್ ಕ್ಲಬ್‌ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೂರ್ನಾಡು ಪದವಿ ಕಾಲೇಜಿನ ರೋಟರ‌್ಯಾಕ್ಟ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ರಕ್ಷಾ ಪ್ರಭಾಕರ್ ಅವರಿಗೆ ರೋಟರ‌್ಯಾಕ್ಟ್‌ನ ನವರತ್ನ-೨೦೨೩ ಪ್ರಶಸ್ತಿಯನ್ನು ರೋಟರ‌್ಯಾಕ್ಟ್‌ನ ಜಿಲ್ಲಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಆರ್.ಕೆ.ನಿಖಿಲ್, ನೂತನ ಸಾಲಿನ ಸಂಚಾಲಕ ಮಹಮ್ಮದ್ ಅಸ್ಲಂ ಪ್ರಧಾನ ಮಾಡಿದರು.
ಶ್ರೀರಕ್ಷಾ ರೋಟರ‌್ಯಾಕ್ಟ್‌ನ ಅಧ್ಯಕ್ಷೆಯಾಗಿ ಕೈಗೊಂಡ ಅನೇಕ ಸಮಾಜಮುಖಿ ಕಾರ್ಯಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿಯೇ ಶ್ರೀರಕ್ಷಾರನ್ನು ೨೦೨೩-೨೪ ಸಾಲಿನ ಜಿಲ್ಲಾ ರೋಟರ‌್ಯಾಕ್ಟ್‌ನ ಸಾಂಸ್ಕೃತಿಕ ತಂಡದ ಅಧ್ಯಕ್ಷರಾಗಿ ನೇಮಕಮಾಡಲಾಗಿದೆ.
ಮೂರ್ನಾಡು ಪದವಿ ಕಾಲೇಜಿನ ರೋಟರ‌್ಯಾಕ್ಟ್ ಕ್ಲಬ್‌ನ ಸಲಹೆಗಾರರಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ಸಂಪತ್ ಕುಮಾರ್, ವಸಂತ್ ಕುಮಾರ್, ಹರೀಶ್ ಕಿಗ್ಗಾಲು, ಎನ್.ಸಿ.ನವೀನ್, ಬೋಪಣ್ಣ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಪೋಕ್ಲು ನಿವಾಸಿಯಾಗಿರುವ ಶ್ರೀರಕ್ಷಾ ಸ್ಥಳೀಯ ಪತ್ರಕರ್ತ ಪಿ.ವಿ.ಪ್ರಭಾಕರ್ ಮತ್ತು ಅಶ್ವಿನಿ ದಂಪತಿ ಪುತ್ರಿಯಾಗಿದ್ದಾಳೆ.