ವ್ಯಕ್ತಿತ್ವ ಬೆಳೆಸಿಕೊಳ್ಳಲು ರೋಟ್ರಾಕ್ಟ್​ ಕ್ಲಬ್​ನಿಂದ ಅವಕಾಶ

24Manjari1
Published on

ಮಾಂಜರಿ: ಸಮಾಜದ ಧನಾತ್ಮಕ ಚಿಂತನೆ ಮಾಡಲು ಸಮಾಜಮುಖಿ ಬೆಳವಣಿಗೆ ಹೊಂದುವ ಜತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಲು ರೋಟ್ರಾಕ್ಟ್​ ಕ್ಲಬ್​ನಿಂದ ದೊರೆತಿರುವ ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಬೆಳಗಾವಿಯ ರೋಟ್ರಾಕ್ಟ್​ ಕ್ಲಬ್​ ಸಂಯೋಜಕ ಹರ್ಷ ಶಿಂಧೆ ಹೇಳಿದರು.

ಅಂಕಲಿ ಗ್ರಾಮದಲ್ಲಿರುವ ಕೆಎಲ್​ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಬಿಸಿಎ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಪರಿಸರ ಸಾಮಾಜಿಕ ಮತ್ತು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗುವ ಕಾರ್ಯ ಮಾಡಲು ಇದೊಂದು ಸದಾವಕಾಶ ಎಂದರು.

ಪ್ರಾಂಶುಪಾಲ ಎಂ.ಎಸ್​.ಕಾನಡೆ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಲು ಭಾಗವಹಿಸಬೇಕು ಎಂದರು.

ರೊಟ್ರಾಕ್ಟ್​ ಕ್ಲಬ್​ ಅಧ್ಯಕ್ಷ ಶ್ರೀಧರ ಗಜಣ್ಣವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾಗಿ ನೇಹಾ ಕೊಠಿವಾಲೆ ಮತ್ತು ಅಭಿನಯಾ ಕಿತ್ತೂರೆ ಆಯ್ಕೆಯಾಗಿ ಪದಗ್ರಹಣ ಮಾಡಿದರು. ರಾಹುಲ್​ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net