

ಮಡಿಕೇರಿ: ಮಡಿಕೇರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ರೋಟರಿ ಮಡಿಕೇರಿ ವತಿಯಿಂದ ರೋಟರಾಕ್ಟ್ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು.
ರೋಟರಾಕ್ಟ್ ಸಂಘದ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಚ್.ಕೆ.ಜೀವನ್, ಉಪಾಧ್ಯಕ್ಷರಾಗಿ ನಿಷ್ಮ, ಕಾರ್ಯದರ್ಶಿಯಾಗಿ ಪಿ.ಆರ್.ರಾಹುಲ್, ಸಾಜೆರ್ಂಟ್ ಅಟ್ ಅರ್ಮ್ಸ್ ಆಗಿ ಮಮತಾ, ಖಜಾಂಚಿ ಗಾಯತ್ರಿ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಮೇಘನಾ ಹಾಗೂ ಸಮುದಾಯ ಸೇವಾ ನಿರ್ದೇಶಕರಾಗಿ ಅಕ್ಷತಾ ಅವರು ಅಧಿಕಾರ ವಹಿಸಿಕೊಂಡರು.
ಅನುಸ್ಥಾಪನ ಅಧಿಕಾರಿಯಾಗಿ ಉಪಸ್ಥಿತರಿದ್ದ ರೋ.ಮನೋಹರ್.ಎಚ್.ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರೋಟರಿ ಕಾರ್ಯಚಟುವಟಿಕೆಯ ಕುರಿತು ವಿವರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ರೋಟರಿ ಮಡಿಕೇರಿಯ ಅಧ್ಯಕ್ಷ ರೋ.ಲಲಿತ ರಾಘವನ್ ಅವರು ರೋಟರಿ ಸಂಸ್ಥೆ ಮತ್ತು ಶುಚಿತ್ವದ ಮಹತ್ವವನ್ನು ತಿಳಿಸಿದರು.
ಕಾಲೇಜ್‌ನ ಪ್ರಾಂಶುಪಾಲರಾದ ಡಾ.ವೆಂಕಟೇಶ ಪ್ರಸನ್ನ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ.ಅನುಪಮಾ ಸಭಾಪತಿ, ರೋಟರಾಕ್ಟ್ ಸಂಯೋಜಕರಾದ ಸುಪ್ರಿಯಾ, ಕಳೆದ ಸಾಲಿನ ರೋಟಾರಾಕ್ಟ್ ಅಧ್ಯಕ್ಷೆ ಬಿ.ಸುಫಾನ, ನೂತನ ಅಧ್ಯಕ್ಷ ಎಚ್.ಕೆ.ಜೀವನ್, ಕಾರ್ಯದರ್ಶಿ ಪಿ.ಆರ್.ರಾಹುಲ್, ಪದಾಧಿಕಾರಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದರು.
ನಿಷ್ಮ ಮತ್ತು ತಂಡ ಪ್ರಾರ್ಥಿಸಿದರು, ಅಕ್ಷತಾ ಸ್ವಾಗತಿಸಿ, ಮೇಘನಾ ಪೂವಯ್ಯ ನಿರೂಪಿಸಿ, ರಾಹುಲ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.