ತಂಬಾಕು ಮುಕ್ತ ಜೀವನ ನಡೆಸಿ: ಗುಲಾಬಿ ಆಂದೋಲನಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ

Rose Movement as part of National Cancer Awareness mandya
Published on

ಮಂಡ್ಯ: ತಂಬಾಕು ಉತ್ಪನಗಳ ಬಳಕೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗ ಬರುತ್ತದೆ. ಆದ್ದರಿಂದ ಸಾರ್ವಜನಿಕರು ತಂಬಾಕು ಮುಕ್ತ ಜೀವನ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ಕಿವಿಮಾತು ಹೇಳಿದರು.

ರಾಷ್ಟ್ರೀಯ ಕ್ಯಾನ್ಸರ ಜಾಗೃತಿ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗುಲಾಬಿ ಆಂದೋಲನಕ್ಕೆ ನಗರದ ಡಿಸಿ ಕಚೇರಿ ಎದುರು ಚಾಲನೆ ನೀಡಿ ಮಾತನಾಡಿದರು. ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಬಳಕೆ ಮಾಡುವುದು ಅಪರಾಧ. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ಶಾಲಾ ಮಕ್ಕಳಿಂದ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದಲಾದರೂ ಬದಲಾವಣೆ ಆಗಬೇಕೆಂದು ಮನವಿ ಮಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್, ಡಾ.ಬೆಟ್ಟಸ್ವಾಮಿ, ಡಾ.ಜವರೇಗೌಡ, ಡಾ.ಶಶಿಕಲಾ, ಜಿಲ್ಲಾ ಸಲಹೆಗಾರ ಎಸ್.ಎನ್.ತಿಮ್ಮರಾಜು, ಮೋಹನ್‌ಕುಮಾರ್, ಮಂಗಳಾ, ಶಿವಸ್ವಾಮಿ, ರೋಟರಿ ಮಂಡ್ಯ ಅಧ್ಯಕ್ಷೆ ಬಿ.ಎಸ್.ಅನುಪಮಾ, ಆಶಾಲತಾ ಪುಟ್ಟೇಗೌಡ, ಲಕ್ಕಪ್ಪಗೌಡರು ಇತರರಿದ್ದರು.

ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟ ಜಾಥಾ ಆರ್‌ಟಿಒ ಕಚೇರಿ, ನೂರಡಿ ರಸ್ತೆ ಮೂಲಕ ಸಾಗಿ ಕರ್ನಾಟಕ ಬಾರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಬಳಿಕ ಪೊಲೀಸ್ ಕಾಲನಿ ಶಾಲೆಯವರೆಗೂ ಅಂಗಡಿ ಮಾಲೀಕರಿಗೆ ಹಾಗೂ ತಂಬಾಕು ಬಳಕೆದಾರರಿಗೆ ವಿದ್ಯಾರ್ಥಿಗಳು ಗುಲಾಬಿ ಹೂವು ನೀಡಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಹೊರಬರುವಂತೆ ಮನವಿ ಮಾಡಿದರು. ಅಂತಿಮವಾಗಿ ಮಕ್ಕಳು ತಂಬಾಕು ಮುಕ್ತ ಜೀವನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net