ನೃಪತುಂಗ ಬೆಟ್ಟದಲ್ಲಿ ರೋಪ್ ವೇ

New Betta New
Published on

ಹುಬ್ಬಳ್ಳಿ : ನನೆಗುದಿಗೆ ಬಿದ್ದಿದ್ದ ಇಲ್ಲಿನ ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆ ಉದ್ಯಾನದವರೆಗೆ ರೋಪ್ ವೇ ನಿರ್ಮಾಣ ಕಾಮಗಾರಿಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ನೃಪತುಂಗ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಇದೀಗ ದೆಹಲಿಯಿಂದ ಬಂದಿದ್ದ ತಂತ್ರಜ್ಞರ ತಂಡದೊಂದಿಗೆ ನೃಪತುಂಗ ಬೆಟ್ಟಕ್ಕೆ ಭೇಟಿ ನೀಡಿ, ರೋಪ್ ವೇ ನಿರ್ಮಾಣದ ಕುರಿತು ಪರಿಶೀಲಿಸಿದ್ದಾರೆ.

250 ರಿಂದ 300 ಮೀಟರ್ ವ್ಯಾಪ್ತಿಯಲ್ಲಿ ರೋಪ್ ವೇ ನಿರ್ವಿುಸುವ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದ ಅಡಿ ಅಗತ್ಯ ಸೌಲಭ್ಯ ಒದಗಿಸುವ ಕುರಿತು ಶಾಸಕರು ತಜ್ಞರ ತಂಡದೊಂದಿಗೆ ರ್ಚಚಿಸಿದರು.

ಇದೇ ಜೂನ್​ವೊಳಗಾಗಿ ರೋಪ್ ವೇ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

ನೃಪತುಂಗ ಬೆಟ್ಟ, ಪತ್ರಕರ್ತ ನಗರ ಹಾಗೂ ಉಣಕಲ್ಲ ಕೆರೆ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹೇಮಂತ ದೇಸಳ್ಳಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಚೇತನ ಕ್ಯಾಸನೂರು, ಉಪ ವಲಯ ಅರಣ್ಯಾಧಿಕಾರಿ ಎಂ.ಎಸ್. ರಾಯನಗೌಡರ, ಪ್ರಮುಖರಾದ ಚನ್ನು ಹೊಸಮನಿ, ಸಿದ್ದು ಮೊಗಲಿಶೆಟ್ಟರ, ಎಚ್.ಎಸ್. ಕಿರಣ, ರಘು ಧಾರವಾಡಕರ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net