ಶೇಂಗಾಮಿಲ್‌ಗಳ ಹೊಟ್ಟಿನಿಂದ ಬೆಳೆ ನಷ್ಟ

3 pvg 1
Published on

ಪಾವಗಡ : ಪಟ್ಟಣದ ದೇವಲಕೆರೆ ಕ್ರಾಸ್ ಬಳಿ ಇರುವ ಶೇಂಗಾಮಿಲ್‌ಗಳಿಂದ ಹೊರಬರುವ ಹೊಟ್ಟಿನಿಂದ ಬೆಳೆ ನಷ್ಟವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾಲೀಕರಿಂದ ನಷ್ಟ ಪರಿಹಾರ ಕೊಡಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

ತಾತಾಪ್ರಸನ್ನ ಎಂಬುವವರು 7 ಮಿಲ್‌ಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಈ ಮಿಲ್‌ಗಳಿಂದ ಗಾಳಿಯಲ್ಲಿ ತೂರಿಬರುವ ಶೇಂಗಾ, ಭತ್ತದ ಹೊಟ್ಟು ಜಮೀನುಗಳಲ್ಲಿನ ಬೆಳೆಗಳ ಮೇಲೆ ಬಿದ್ದು, ಬೆಳೆ ನಷ್ಟವಾಗುತ್ತಿದೆ ಎಂದು ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಬೂಜ ಮತ್ತು ಟೊಮ್ಯಾಟೊ ಬೆಳೆ ನಷ್ಟವಾಗಿದೆ, ಎಕರೆಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ತಾಲೂಕು ರೈತಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಪೂಜಾರಪ್ಪ ಒತ್ತಾಯಿಸಿದರು.

ಸುವಾರು 5 ವರ್ಷಗಳಿಂದ ಮಿಲ್‌ನಿಂದ ರೈತರಿಗೆ ತೊಂದರೆಯಾಗುತ್ತಿದೆ, ಮಿಲ್ ವಾಲೀಕರು ಬಾಡಿಗೆಗೆ ಕೊಟ್ಟು ತುಮಕೂರಿನಲ್ಲಿದ್ದಾರೆ. ಬಾಡಿಗೆದಾರರು ವಾಲೀಕರಿಗೆ ತಿಳಿಸಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಪುರಸಭೆ ವಾಜಿ ಉಪಾಧ್ಯಕ್ಷ ಶಾಂತಕುವಾರ್ ಆಗ್ರಹಿಸಿದರು. ರೈತರಾದ ಗಿರಿಜಮ್ಮ, ನರಸಪ್ಪ, ಹೆಂಜಾರಪ್ಪ, ಮಲ್ಲೇಶ್, ರಾವಾಂಜಿನಪ್ಪ, ನಾಗರಾಜ್, ಲಕ್ಷ್ಮಣ್, ಕೋಳಿ ರಾವಾಂಜಿನಪ್ಪ, ಬೈರಪ್ಪ, ಸುನಿಲ್ ಮತ್ತಿತರಿದ್ದರು.

ತಹಸೀಲ್ದಾರ್ ಪರಿಶೀಲನೆ: ರೈತರ ಸಮಸ್ಯೆ ಆಲಿಸಿದ ಬಳಿಕ ಸೋಮವಾರ ಮಿಲ್‌ಗೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ಕೆ. ಆರ್. ನಾಗರಾಜ್, ಮಿಲ್ ವಾಲೀಕರು ಸುರಕ್ಷತಾ ಕ್ರಮ ಕೈಗೊಳ್ಳಲು 1 ವಾರಗಳ ಗಡುವು ಕೇಳಿದ್ದಾರೆ, ಪರಿಹಾರ ನೀಡಬೇಕೆಂಬ ರೈತರ ಒತ್ತಾಯದ ಕುರಿತು ಚರ್ಚಿಸುವುದಾಗಿ ತಿಳಿಸಿದರು.

ಸರ್ವೇ ನಂ.19/14ರ ಜಮೀನಲ್ಲಿ 5 ಎಕರೆಯಲ್ಲಿ ಕರಬೂಜ ಬೆಳೆಯಲಾಗಿದೆ. ಮಿಲ್‌ನಿಂದ ಹೊರಬರುತ್ತಿರುವ ಹೊಟ್ಟು ಬೆಳೆ ಮೇಲೆ ಬಿದ್ದು ನಷ್ಟವುಂಟಾಗಿದೆ. ಹೊಟ್ಟು ಹೊರಬರದಂತೆ ಕ್ರಮತೆಗೆದುಕೊಳ್ಳುವಂತೆ ಹಲವು ಬಾರಿ ಮಿಲ್ ವಾಲೀಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಹೀಗೆಯೇ ಮುಂದುವರಿದರೆ ನ್ಯಾಯಾಲಯದ ಮೊರೆಹೋಗುತ್ತೇವೆ. ಸಿದ್ದಪ್ಪ, ಸ್ಥಳೀಯ ರೈತ, ದೇವಲಕೆರೆ ಕ್ರಾಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net