ಶಾಲೆಗಳಿಗೆ ರಾಜಕೀಯ ತರಬೇಡಿ, ಶಾಸಕ ಪ್ರಸಾದ ಅಬ್ಬಯ್ಯ ಸಲಹೆ, ಹೊಸಗಬ್ಬೂರಲ್ಲಿ ಶಾಲಾ ಕೊಠಡಿ ಉದ್ಘಾಟನೆ

Published on

ಹುಬ್ಬಳ್ಳಿ: ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ಸ್ಥಳವಾಗಿವೆ. ಇತ್ತೀಚಿನ ದಿನಗಳಲ್ಲಿ ಶೈಣಿಕ ಸಂಸ್ಥೆಗಳು ರಾಜಕೀಯ ಕೇಂದ್ರಗಳಾಗುತ್ತಿರುವುದು ದುರ್ದೈವದ ಸಂಗತಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ಪೂರ್ವ ಕ್ಷೇತ್ರದ ಹೊಸಗಬ್ಬೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿ 56ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನಾಲ್ಕು ಹೊಸ ಕೊಠಡಿಗಳನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಶಾಲಾ ಸುಧಾರಣೆ ಸಮಿತಿಯವರು ಅಭಿವೃದ್ಧಿಗೆ ಸಲಹೆ ನೀಡಬೇಕೆ ಹೊರತು ಆಡಳಿತ ನಡೆಸುವುದಾಗಲಿ, ರಾಜಕೀಯ ಮಾಡುವುದಾಗಲಿ ಸರಿಯಲ್ಲ. ಶಾಲೆ ಆವರಣದಲ್ಲಿ ರಾಜಕೀಯ ಮಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಹೊಸಗಬ್ಬೂರಲ್ಲಿ ಜನರ ಬೇಡಿಕೆಯಂತೆ ಅಂಗನವಾಡಿಗೆ ಹೊಸ ಕಟ್ಟಡ, ಕುಡಿಯುವ ನೀರಿನ ಅರವಟಿಗೆ. ಪೇವರ್ಸ್ ಅಳವಡಿಕೆ ಸೇರಿ ಸಮಗ್ರ ಅಭಿವೃದ್ಧಿಯೊಂದಿಗೆ ಶಾಲೆಯನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ವಿಜನಗೌಡರ ಪಾಟೀಲ, ನಿಂಗಪ್ಪ ಬಡಿಗೇರ, ಮುಖ್ಯಶಿಕ್ಷಕಿ ರೇಣುಕಾ ದೇವಗಿರಿಕರ್, ಮುಖಂಡರಾದ ಮಂಜುನಾಥ ಉಪ್ಪಾರ, ಹಜರತ್ಅಲಿ ಮುನ್ಸಿ, ಭೀಮಣ್ಣ ಬಡಿಗೇರ, ನಾಗಪ್ಪ ರಾಣೋಜಿ, ದ್ಯಾಮಣ್ಣ ತಳವಾರ, ಗುಣಸಾರಗವ್ವ ಸವದತ್ತಿ, ಚನ್ನಪ್ಪ ಮಾಯಣ್ಣವರ, ಬಸವರಾಜ ಅಳಗವಾಡಿ, ರಮೇಶ ಅರಿಂದರಾಳ, ನಾಗರಾಜ ಉಪ್ಪಾರ, ಗುರುಸಿದ್ದಪ್ಪ ಬಡ್ನಿ, ಬಸಪ್ಪ ಹಿರಿಗಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net