

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆ ಪಕ್ಕ ಇರುವ ಇಂದಿರಾ ಕ್ಯಾಂಟೀನ್ ಮೇಲ್ಛಾವಣಿಯ ಕಾಮಗಾರಿ ಕಳಪೆ ಆಗಿರುವ ಬಗೆಗೆ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕುರಿತು ಮಾಹಿತಿ ಪಡೆದ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಭೇಟಿಯ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ನ ಊಟ ಮಾಡಿ, ಪರಿಶೀಲಿಸಿದರು. ಊಟ ಮಾಡುತ್ತಿದ್ದ ಶಾಲಾ ಮಕ್ಕಳ ಬಳಿ ಊಟದ ರುಚಿಯ ಕುರಿತು ವಿಚಾರಿಸಿ ಅಡುಗೆ ಕೋಣೆಗೆ ಭೇಟಿ ನೀಡಿ, ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದರು. ಮೂಲಸೌಕರ್ಯಗಳನ್ನು ತಕ್ಷಣ ಪಟ್ಟಣ ಪಂಚಾಯಿತಿ ನಿಧಿಯಿಂದ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ನಿಧಿಯಿಂದ ನಿರ್ವಿುಸಿದ 6 ಲಕ್ಷ ರೂ. ಮೌಲ್ಯದ ಮೇಲ್ಛಾವಣಿ ಕಾಮಗಾರಿ ವೀಕ್ಷಿಸಿದ ಅವರು ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ವಿುಸಿರುವುದರಿಂದ ಗುತ್ತಿಗೆದಾರರಿಗೆ ಬಿಲ್ ತಡೆ ಹಿಡಿಯುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಪಪಂ ಸದಸ್ಯರಾದ ಸತೀಶ ನಾಯ್ಕ, ರಾಜು ನಾಯ್ಕ ಇದ್ದರು.