ಶಾರ್ಟ್ ಸರ್ಕ್ಯೂಟ್‌ನಿಂದ ಛಾವಣಿ ಬೆಂಕೆಗಾಹುತಿ

ಮಾಳಿಗನತ್ತ ಗ್ರಾಮದ ಕಮಲಮ್ಮ ಅವರ ಜಮೀನಿನಲ್ಲಿ ಚಾವಣಿ, ಪರಿಕರ ಹಾಗೂ ಸ್ಟಾಟರ್ ಬೆಂಕಿಗಾಹುತಿಯಾಗಿರುವುದು.
ಮಾಳಿಗನತ್ತ ಗ್ರಾಮದ ಕಮಲಮ್ಮ ಅವರ ಜಮೀನಿನಲ್ಲಿ ಚಾವಣಿ, ಪರಿಕರ ಹಾಗೂ ಸ್ಟಾಟರ್ ಬೆಂಕಿಗಾಹುತಿಯಾಗಿರುವುದು.
Published on

ಹನೂರು: ತಾಲೂಕಿನ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಿಗನತ್ತ ಗ್ರಾಮದ ಜಮೀನೊಂದರಲ್ಲಿ ಸೋಮವಾರ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯ ಛಾವಣಿಗೆ ಹಾನಿಯಾಗಿದೆ.

ಗ್ರಾಮದ ನಿವಾಸಿ ಕಮಲಮ್ಮ ಅವರು ಹೊರವಲಯದಲ್ಲಿ ಜಮೀನನ್ನು ಹೊಂದಿದ್ದು, ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದ ಸ್ಟಾಟರ್‌ನಲ್ಲಿ ಬೆಳಗ್ಗೆ ಬೆಂಕಿ ಕಾಣಿಕೊಂಡಿದೆ.

ಪರಿಣಾಮ ಬೆಂಕಿ ಜ್ವಾಲೆ ಚಾವಣಿಗೆ ತಗುಲಿ ಹಾನಿಯಾಗಿದ್ದು, ಸ್ಟಾಟರ್ ಯಂತ್ರ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸುದ್ದಿ ತಿಳಿದು ಗ್ರಾಪಂ ಅಧ್ಯಕ್ಷ ಸಂತೋಷ್‌ಕುಮಾರ್ ಹಾಗೂ ಸದಸ್ಯ ಕೃಷ್ಣಮೂರ್ತಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net