

ಕೊಲ್ಹಾರ: ಒಟ್ಟು 23 ಸದಸ್ಯ ಬಲದ ರೋಣಿಹಾಳ ಗ್ರಾಮ ಪಂಚಾಯಿತಿಯಲ್ಲಿ ಒಪ್ಪಂದದಂತೆ ತೆರವಾದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಿತು.
ಅಧ್ಯಕ್ಷರಾಗಿ ನೌಶಾದಬಿ ಅಮೀನಸಾಬ ಚೌಧರಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮಾರುತಿ ಸಿದ್ದಪ್ಪ ಭೋಸಲೆ ಹಾಗೂ ಶಿವಲಿಂಗಯ್ಯ ಕಲ್ಲಯ್ಯ ಮಠಪತಿ ನಾಮಪತ್ರ ಸಲ್ಲಿಸಿದ್ದರು. 15 ಮತಗಳನ್ನು ಪಡೆದ ಮಾರುತಿ ಸಿದ್ದಪ್ಪ ಭೋಸಲೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಪ್ರತಿಸ್ಪರ್ಧಿ ಶಿವಲಿಂಗಯ್ಯ ಕಲ್ಲಯ್ಯ ಮಠಪತಿ 10 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಸುನೀಲ ಮುದ್ದಿನ ಘೋಷಿಸಿದರು. ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಲಾಯಿತು. ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗುರುನಗೌಡ ಬಿರಾದಾರ ಮಾತನಾಡಿದರು.