ಸಂಗೀತ ಕ್ಷೇತ್ರಕ್ಕೆ ರೋಣ ಕೊಡುಗೆ ಅಪಾರ

Music _1
Published on

ನರೇಗಲ್ಲ: ನಮ್ಮ ಇತಿಹಾಸ ನಾವು ತಿಳಿದಿರಬೇಕು. ರೋಣ ಪಟ್ಟಣದ ನೀಲಕಂಠ ಬುವಾ, ಮರಿಯಪ್ಪ, ಅಮರ ಗೋಳ್ಕರ ಸೇರಿ ಅನೇಜ ಮಹನೀಯರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ರೋಣ ಗುಲಗಂಜಿ ಮಠದ ಗುರುಪಾದ ದೇವರು ಹೇಳಿದರು.

ಪಟ್ಟಣದ ಡಾ. ಕೆ.ಬಿ. ಧನ್ನೂರ ಪಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ. ಕೆ.ಬಿ. ಧನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಮರ ಗೋಳ್ಕರ ಸಂಗೀತ ಶಾಲೆ ಪ್ರಾರಂಭಿಸಿದ್ದು ಶ್ಲಾಘನೀಯವಾಗಿದೆ ಎಂದರು. ಶಾಸಕ ಜಿ.ಎಸ್. ಪಾಟೀಲ, ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿದರು. ಡಾ. ಕೆ.ಬಿ.ಧನ್ನೂರ, ಎಂ.ಎಸ್. ದಢೇಸೂರಮಠ, ಐ.ಎಸ್. ಪಾಟೀಲ, ಎಂ.ಎ. ಹಿರೇವಡೆಯರ, ಯೂಸುಫ್ ಇಟಗಿ, ಕುಮಾರಸ್ವಾಮಿ ಕೋರಧಾನ್ಯಮಠ, ಸುನೀಲ ಬಸವರಡ್ಡೇರ, ಕಸ್ತೂರಿ ಧನ್ನೂರ, ಪಾರ್ವತಿ ದೊಡ್ಡಣ್ಣವರ, ಪ್ರಕಾಶ ಪಲ್ಲೇದ, ಬಿ.ಜಿ. ಹಳ್ಳೂರ, ಉಮೇಶ ಅರಹುಣಶಿ, ಎಸ್.ಎ. ಪಾಟೀಲ, ಶೇಖಪ್ಪ ಕೆಂಗಾರ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ್, ಕಳಕನಗೌಡ ಪೊಲೀಸ್‌ಪಾಟೀಲ, ರಶ್ಮಿ ಬಸವರಡ್ಡೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net