ನರಗುಂದ ಹಾಗೂ ರೋಣ ತಾಲೂಕಿನ 131 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ಘಟಕ ಪರೀವಿಕ್ಷಣೆ

WhatsApp Image 2025-05-06 at 4.24.09 PM (1)
Published on
ಗದಗ: ನರಗುಂದ ಹಾಗೂ ರೋಣ ತಾಲೂಕಿನ 131 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಸ್ಥಳದಲ್ಲಿದ್ದ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರರು ಸಾಮಾನ್ಯ ವಿವರಣೆಯನ್ನು ನೀಡಿದರು. ರೇಣುಕಾ ಸಾಗರ ಜಲಾಶಯದ ಜಾಕ್ ವೆಲ್ಡ್ ನಿಂದ 36 ಕಿಮೀ ಅಂತರದಲ್ಲಿರುವ ಚಿಕ್ಕನರಗುಂದಲ್ಲಿರುವ ಶುದ್ದ ಕುಡಿಯುವ ನೀರನ್ನು ಪಂಪ ಮಾಡಿ, ಶುದ್ಧಿಕರಿಸಿ ಒಟ್ಟು 8 ಜಲಾಗಾರದಿಂದ 131 ಹಳ್ಳಿಗಳಿಗೆ ನೀರನ್ನು ಸರಬರಾಜು ಮಾಡುತ್ತಿರುವ ಅಂಶವನ್ನು ದಾಖಲೆಗಳೊಂದಿಗೆ ವಿವರಿಸಲಾಯಿತು.
ಪ್ರಸ್ತುತವಾಗಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾರ್ಚ ಮತ್ತು ಎಪ್ರಿಲ್ ತಿಂಗಳ ಸರಬರಾಜು ಆಗಿರುವ ನೀರಿನ ಪ್ರಮಾಣದ ಬಗ್ಗೆ ಮಾಹಿತಿಯನ್ನು ಪರೀಶಿಲಿಸಿದರು ಈ ವೇಳೆ ಕೊತಬಾಳ ಜಲಗಾರದಿಂದ ಕಡಿಮೆ ಪ್ರಮಾಣ ಸರಬರಾಜು ಆಗಿರುವ ಬಗ್ಗೆ ಆಕ್ಷೇಪಿಸಿದರು. ಸದರಿ ವಿಷಯವಾಗಿ ಪ್ರೊಜೆಕ್ಟ್ ಮ್ಯಾÃನೆಜರ್ ರವರು ಸದರಿ ಅವಧಿಯಲ್ಲಿ ವಿದ್ಯತ್ ವೈತ್ಯಯ ಹಾಗೂ ಅಬ್ಬಿಗೇರಿ ಜಲಗಾರಕ್ಕೆ ಹೆಚ್ಚಿಗೆ ಪ್ರಮಾಣ ನೀರೋದಗಿಸಿರುವ ಹಿನ್ನಲೆಯಲ್ಲಿ ಕಡಿಮೆ ಪ್ರಮಾಣದ ನೀರು ಹಂಚಿಕೆಯಾಗಿದೆ ಹಾಗೂ ಸದರಿ ಅಂಶವನ್ನು ಮರುಕಳಿಸದಂತೆ ಮುಂದಿನ ದಿನಗಳಲ್ಲಿ ಕರ್ತವ್ಯ ನಿರ್ವಹಿದಲಾಗುವುದೆಂದು ತಿಳಿಸಿದರು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಗದಗ ರವರು ಮೇ05 ರಂದು ನರಗುಂದ ಹಾಗೂ ರೋಣ ತಾಲೂಕಿನ 131 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರಿನ ಘಟಕದ ಸ್ಥಳ ಪರೀವಿಕ್ಷಿಣಾ ವರದಿ ಸ್ಥಳ ಪರೀವಿಕ್ಷಣಾ ಅವಧಿಯಲ್ಲಿ ಹಾಜರಿದ್ದ ಅಧಿಕಾರಿಗಳು ರಾಘವೇಂದ್ರ ಪಿ ದೊಡಮನಿ (ಪ್ರಭಾರ) ಕಾರ್ಯನಿರ್ವಾಹಕ ಇಂಜನೀಯರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಗದಗ ಎನ್.ವೈ. ಬೇವಿನಗಿಡದ, ಸಹಾಯಕ ಕಾರ್ಯನಿರ್ವಾಹಕ ಇಂಜನೀಯರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ನರಗುಂದ ಗಣಪತಸಾ ಟೀಕಣದಾರ, ಸಹಾಯಕ ಇಂಜನೀಯರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ನರಗುಂದ ಎಂ.ವಿ.ದೇಸಾಯಿ, ಪ್ರೊಜೆಕ್ಟ್ ಮ್ಯಾÃನೆಜರ್ ತಹಲ ಡಿಬಿಓಟಿ ಪ್ಯಾಕೇಜ್ 1 ನರಗುಂದ ಮುದುವರೆದು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೈಗೊಂಡ ಕಾರ್ಯಾಚರಣೆ ಮತ್ತು ನಿರ್ವಹಣೆ ದಾಖಲೆಗಳನ್ನು ಪರಿಶೀಲಿಸಿ, ಸ್ಥಳದಲ್ಲಿದ್ದ ಕಾರ್ಯನಿರ್ವಾಹಕ ಇಂಜನೀಯರ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ರವರುಗಳಿಗೆ ಮಾಸಿಕವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಪರಿಶೀಲಿಸುವಂತೆ ನಿರ್ದೇಶನ ನೀಡಲಾಯಿತು. ಉದಾಹರಣೆಗೆ ವಿದ್ಯತ್ ಸ್ತಾವರಗಳ ಮಾಸಿಕ ಪರಿಶೀಲನೆ, ಪಂಪು-ಮೋಟಾರಗಳ ಮಾಸಿಕ ಪರಿಶೀಲನೆ, ಜನರೇಟರಗಳನ್ನು ಸುಸ್ತಿತಿಯಲ್ಲಿರುವಂತೆ ಸೂಚನೆ ನಿಡಿದರು.
ಮಾರ್ಚ ಮತ್ತು ಎಪ್ರೀಲ್ ತಿಂಗಳ ವಿದ್ಯತ್ ವೈತ್ಯಯಗಳ ಬಗ್ಗೆ ಪ್ರೊಜೆಕ್ಟ್ ಮೇನೆಜರ್ ರವರು ಆಕ್ಷೇಪಣೆ ವ್ಯಕ್ತಪಡಿಸಿದರು, ಸದರಿ ವಿಷಯವಾಗಿ ವಿದ್ಯುತ್ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು. ಮುಂದುವರೆದು ಸದರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಯೋಜನೆಯ ಹಸ್ತಾಂತರದ ಬಗ್ಗೆ ಚರ್ಚಿಸಿ, ಪ್ರೊಜೆಕ್ಟ್ ಮೇನೆಜರ್ ರವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು.
ಮುಂದುವರೆದು ಪ್ರೊಜೆಕ್ಟ್ ಮೇನೆಜರ್ ರವರು ಕಳೆದ 16 ತಿಂಗಳಿAದ ಬಿಲ್ ಪಾವತಿಯಾಗದಿರುವ ಬಗ್ಗೆ ಹಾಗೂ ಸಿಬ್ಬಂದಿಯವರಿಗೆ ಮಾಸಿಕವಾಗಿ ಸಂಬಳ ನೀಡಲು ಕಷ್ಟವಾಗುತ್ತಿರುವ ಬಗ್ಗೆ ತಿಳಿಸಿ, ಬಿಲ್ ಪಾವತಿಸುವಂತೆ ಕೋರಿದರು. ಸದರಿ ವಿಷಯದ ಬಗ್ಗೆ ಈಗಾಗಲೆ ಇಲಾಖೆಗೆ ಪತ್ರ ಬರೆದಿದೆ ಹಣ ಬಿಡುಗಡೆಯಾದ ತಕ್ಷಣ, ಬಿಲ್ ಪಾವತಿಸಲು ಕ್ರಮವಹಿಸುವಂತೆ ಕಾರ್ಯನಿರ್ವಾಹಕ ಇಂಜನೀಯರ ರವರಿಗೆ ಸೂಚಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net