ಪರೀಕ್ಷೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಸಹಕಾರ?

27 RON 4
Published on

ರೋಣ: ಪಟ್ಟಣದ ತಹಸೀಲ್ದಾರ ಕಛೇರಿಯ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್ಸೆಎಸ್ಸೆಲ್ಸಿ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಬಹುತೇಕ ಪ್ರೌಢಶಾಲೆಗಳ ಮುಖ್ಯೋಪಾಧ್ಯಯರು ಪರೀಕ್ಷೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಸಹಕಾರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ನರೇಗಲ್ ಅನ್ನದಾನೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಎಮ್.ಐ. ವಿರಾಪೂರ ಮಾತನಾಡಿ, ಪ್ರತಿ ವರ್ಷವೂ ಪರೀಕ್ಷೆಯ ಸಮಯದಲ್ಲಿ ನಾವು ಹತ್ತಾರು ಭಾರಿ ದೂರವಾಣಿ ಕರೆ ಮಾಡಿ ಕರೆಸುವವರೆ ಪೊಲೀಸ್‌ರು ಪರೀಕ್ಷಾ ಬಂದೂಬಸ್ತಿಗೆ ಬರುವುದಿಲ್ಲಾ ಎಂದು ಹೇಳಿದರು. ರೋಣ ಪಟ್ಟಣದ ಶರಣಬಸವೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಿ.ಆರ್. ದಿವಟೂರ ಮಾತನಾಡಿ, ನಮ್ಮ ಶಾಲೆಯ ಪರೀಕ್ಷೆಯ ಬಂದೂಬಸ್ತಿಗೆ ಬರುವ ಪೊಲೀಸ್‌ರು ಗಿಡದ ನೆರಳಿಗೆ ಖುರ್ಚಿಹಾಕಿಕೊಂಡು ಆರಾಮವಾಗಿ ಕುಳಿತುಕೊಂಡು ಬಿಡುತ್ತಾರೆ, ಪರೀಕ್ಷಾ ಕೊಠಡಿಯಲ್ಲಿ ಹೊರಗಿನ ವಿದ್ಯಾರ್ಥಿಗಳು ನಕಲು ಚೀಟಿ ತಂದು ಏಸೆಯುತ್ತಿರುವ ಬಗ್ಗೆ ನಾವು ಅವರಿಗೆ ಸೂಚಿಸಿದ ನಂತರ ಪರೀಕ್ಷಾ ಕೊಠಡಿ ಕಡೆಗೆ ಆಗಮಿಸುತ್ತಾರೆ ಎಂದು ದೂರಿದರು, ಪಟ್ಟಣದ ವ್ಹಿ.ಎಫ್. ಪಾಟೀಲ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಬಿ.ಎಸ್. ಖಾಲೀದ ಮಾತನಾಡಿ, ನಮ್ಮ ಶಾಲೆಗೆ ಕಂಪೌಡ ಇರುವುದಿಲ್ಲಾ. ಹೀಗಾಗಿ, ಇಬ್ಬರಾದುರು ಪೊಲೀಸ್‌ರನ್ನು ಕಳಿಸುವಂತೆ ಹೇಳಿದರು, ಒಬ್ಬನೇ ಒಬ್ಬ ಪೊಲೀಸ್ ಬರುತ್ತಾರೆ, ಇದರಿಂದಾಗಿ ನಮಗೆ ಸುಗಮ ಪರೀಕ್ಷೆ ನಡೆಸಲು ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ ಮಾತನಾಡಿ, ಪ್ರಸಕ್ತ ಸಾಲೀನ ಎಸ್ಸೆಎಸ್ಸೆಲ್ಸಿ ಪರೀಕ್ಷೆ ಮಾರ್ಚ ೩೧ ರಿಂದ ಏಪ್ರೀಲ್ ೧೫ ರ ವರೆಗೆ ನಡೆಯಲಿವೆ. ತಾಲೂಕಿನಲ್ಲಿ ೧೩ ಪರೀಕ್ಷಾ ಕೇಂದ್ರಗಳಿದ್ದು, ೩೬೮೧ ವಿದ್ಯಾರ್ಥಿಗಳ ನೊಂದಣಿಯಾಗಿದೆ ಎಂದರು. ತಹಸೀಲ್ದಾರ ವಾಣಿ ಉಂಕಿ ಸೇರಿದಂತೆ ರಸ್ತೆ ಸಾರಿಗೆ, ವಿದ್ಯುತ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯೋಪಾಧ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net