ದುಶ್ಚಟ ತ್ಯಜಿಸಿ ಆರೋಗ್ಯವಂತರಾಗಿ

MENASAGI
Published on

ಮೆಣಸಗಿ: ಶ್ರೀ ಲಿಂಗಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಗದಗ ಸಂಯುಕ್ತ ಆಶ್ರಯದಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ರೋಣ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನೆ ಸಮಾರಂಭವನ್ನು ಭೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮೀಜಿ ಉದ್ಘಾಟಿಸಿದರು.

ಯುವಜನತೆ ದುಶ್ಚಟಗಳಿಂದ ದೂರವಿದ್ದು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು. ಜತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಭಾಗವಹಿಸಬೇಕು ಎಂದರು.

ಈ ವೇಳೆ ಚಂದ್ರಯಾನ 3 ಯಶಸ್ಸಿಗೆ ಕಾರಣವಾದ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಯಿತು. ಮಾಜಿ ಶಾಸಕ ಬಿ.ಆರ್. ಯಾವಗಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕಜ್ಜ ಹಿರೇಮಠ, ಉಪಾಧ್ಯಕ್ಷ ರವೀಂದ್ರ ಹಿರೇಮಠ. ಗ್ರಾಪಂ ಅಧ್ಯಕ್ಷ ಈಶ್ವರ ಮುದೇನೂರು. ಜಿಪಂ ಮಾಜಿ ಸದಸ್ಯೆ ಶಾರದಾ ಹಿರೇಗೌಡ್ರು, ದರಿಯವ್ವ ವಾಘಮೋಡೆ, ನಾಗವ್ವ ಕಲಾದಗಿ, ಯಲ್ಲವ್ವ ಜಮನಕಟ್ಟಿ, ಅಶೋಕ ಸಿ. ದಾನರೆಡ್ಡಿ, ರವಿ ವಿ. ಗಲಜಿ, ಲಾಲ್‌ಸಾಬ್ ಈ ಅರಗಂಜಿ, ವೀರಯ್ಯ ಮಠದ, ಮಹಾಂತೇಶ ವಿ. ಪಾಟೀಲ, ಶಂಭಾಜಿ ಕಲಾಲ, ಮಾಂತೇಶ ವಿ. ಸಾಲಿಮಠ, ಎಂ.ಎನ್. ಪಟ್ಟಣಶೆಟ್ಟಿ, ಬಸವರಾಜ ಬದಾಮಿ, ನೀಲಪ್ಪ ಹುಡೇದ, ಎಫ್.ಎಸ್. ತೋಟದ, ಮಹೇಶ ಹೇರಕಲ್, ಪುಂಡಲಿಕಪ್ಪ ಅಸೂಟಿ, ಸುಭಾಸ ಕಪ್ಪಲಿ, ಸುಭಾಸ ಬಾಣದ, ವಿಶ್ವನಾಥ ಹುಡೇದಮನಿ, ವಿ ಎಸ್. ಕೊಣ್ಣೂರ, ರಾಜೇಶ್ವರಿ ಹಿರೇಮಠ, ಕಾಶಪ್ಪಗೌಡ ಮೆಣಸಗಿ, ಡಾ. ಅರುಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net