ಪಾದಯಾತ್ರಿಕರೊಂದಿಗೆ ಹೆಜ್ಜೆ ಹಾಕಿದ ಶ್ವಾನ

360-RON DOG
Published on

ರೋಣ: ಹುಬ್ಬಳ್ಳಿ-ಧಾರವಾಡ ಸುತ್ತಮುತ್ತಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರ ತಂಡ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟ್ಟಿದೆ. ಹುಬ್ಬಳ್ಳಿ ದಾಟಿದ ನಂತರ ಯಾತ್ರಿಗಳೊಂದಿಗೆ ಬೀದಿ ನಾಯಿ ಸೇರಿಕೊಂಡಿದ್ದು, ಅದು ರೋಣ ಪಟ್ಟಣದವರೆಗೂ ತಂಡದ ಜತೆಗೆ ಬಂದಿದೆ.
ಸೋಮವಾರ ಯಾತ್ರಿಕರು ಪಾದಯಾತ್ರೆ ಹೊರಟಿದ್ದು, ಅವರೊಂದಿಗೆ ನಾಯಿ ಕೂಡ ಹೆಜ್ಜೆ ಹಾಕುತ್ತಿದೆ. ನಂಬಿಕಸ್ತ ಪ್ರಾಣಿಯಾಗಿರುವ ನಾಯಿ ಮಂತ್ರಾಲಯಕ್ಕೆ ಹೊರಟಿರುವುದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ಪಾದಯಾತ್ರೆಯಲ್ಲಿ ಸುಮಾರು 80 ಜನರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net