ಮುಂದಿನ ತಲೆಮಾರಿಗಾಗಿ ನೀವು ಕಡ್ಡಾಯವಾಗಿ ಮತದಾನ ಮಾಡಿ : ವೃದ್ಧರಿಗೆ ಕೈ ಮುಗಿದು ಮನವಿ ಮಾಡಿಕೊಂಡ CEO

IMG-20230420-WA0018
Published on

ಗದಗ : ನಿಮ್ಮ ಮುಂದಿನ ತಲೆಮಾರು ಚನ್ನಾಗಿ ಇರಬೇಕು ಅಂದ್ರೆ ನೀವು ಮಾಡುವ ಮತದಾನ ಬಹಳ ಮುಖ್ಯ ಹಾಗಾಗಿ ಕಡ್ಡಾಯವಾಗಿ ಮತದಾನ ಮಾಡಿ ಅಂತಾ ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಡಾ.ಬಿ. ಸುಶೀಲಾ ಅವರು ರೋಣ ಪಟ್ಟಣದ ಪೋತರಾಜನ ಕಟ್ಟಿಯಲ್ಲಿ ಕುಳಿತ ವೃದ್ಧರಿಗೆ ಕೈ ಮುಗಿದು ಮತದಾನಕ್ಕಾಗಿ ಮನವಿ ಮಾಡಿಕೊಂಡರು.

ಪಟ್ಟಣದಲ್ಲಿ ಕಡ್ಡಾಯ ಮತದಾನ ಹಾಗೂ ಮತದಾನ ಜಾಗೃತಿಗಾಗಿ ಜಿಲ್ಲಾ, ತಾಲೂಕ ಪಂಚಾಯತ ಹಾಗೂ ತಾಲೂಕ ಸ್ವೀಪ್ ಸಮಿತಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ *ಕಡ್ಡಾಯ ಮತದಾನಕ್ಕಾಗಿ ಸಾಂಪ್ರದಾಯಿಕ ನಡಿಗೆ..* ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಬಳಿಕ ಜಾಥಾ ಮೂಲಕ ಕಾಲ್ನಡಿಗೆ ಯಲ್ಲಿ ಸಾಗಿದ ಅವರು ಪೋತರಾಜನ ಕಟ್ಟಿ ಮೇಲೆ ಕುಳಿತ ಹಲವಾರು ವೃದ್ದರನ್ನು ನೋಡಿ ಅವರ ಹತ್ತಿರ ಹೋಗಿ ಮತದಾದ ಕುರಿತು ಮಾಹಿತಿ ಹಾಗೂ ಮಹತ್ವದ ಕುರಿತು ಮಾತನಾಡಿದರು. ನಿವೇಲ್ಲಾ ಮುಂದಿನ ತಲೆಮಾರಿಗೆ ಮಾದರಿ ಹಾಗಾಗಿ ತಾವು ದಯಮಾಡಿ ಮತದಾನ ಮಾಡಿ ನಿಮ್ಮ ಮತದಾನ ಮುಂದಿನ ತಲೆಮಾರಿನ ಭವಿಷ್ಯ ಎಂದರು. ನಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಭಾರತವು ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ, ಭಾರತದ ಸಂವಿಧಾನ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನತೆ ಯಿಂದ ಮತ ಚಲಾಯಿಸುವ ಹಕ್ಕು ನೀಡಿದೆ. ಆ ಹಕ್ಕನ್ನು ಮೇ10 ರಂದು ಚಲಾಯಿಸದೆ ನಿರ್ಲಕ್ಷ್ಯ ವಹಿಸದಿರಿ. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಬೇರೆ ಸ್ಥಳಗಳಲ್ಲಿ ವಾಸವಿರುವ ನಿಮ್ಮ ಸಂಬಂಧಿಕರು, ನೆಂಟರ ಮತಗಳು ರೋಣ ಪಟ್ಟಣದಲ್ಲಿದ್ದರೆ ಎಲ್ಲರಿಗೂ ತಿಳಿಸಿ ಮೇ10ರಂದು ತಪ್ಪದೇ ಮತ ಚಲಾಯಿಸಲು ಅವರನ್ನು ಕರೆದು ಹಬ್ಬದ ವಾತಾವರಣ ನಿರ್ಮಿಸಿ ಎಂದರು..

ಜಾಥಾದಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸರಕಾರಿ ನೌಕರರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಕಡ್ಡಾಯ ಮತದಾನಕ್ಕಾಗಿ ಸಂಪ್ರದಾಯಿಕ ನಡಿಗೆ ಜಾಥಾವು ಪಟ್ಟಣದ ಸಿದ್ದಾರೋಡ ಮಠದಿಂದ ಆರಂಭವಾಗಿ ಸೂಡಿ ಕ್ರಾಸ್ , ಮುಲ್ಲಾನಬಾವಿ ಕ್ರಾಸ್, ಪೋತರಾಜಕಟ್ಟಿಯ ವರೆಗೂ ಸಂಚರಿಸಿ ಅಲ್ಲಿ ಮತದಾನ ಜಾಗೃತಿ ಪ್ರತಿಜ್ಞಾವಿಧಿ ಭೋದಿಸಲಾಯಿತು..

ಬಳಿಕ ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ದಲ್ಲಿ ರಂಗೋಲಿ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ. ಎ. ಎನ್. ಭಾರತದ ಸಂವಿಧಾನದ ಅಡಿಪಾಯ ಪ್ರಜಾಪ್ರಭುತ್ವ, ಈ ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಎಲ್ಲರೂ ಕಡ್ಡಾಯ ಮತದಾನ ಮಾಡಿ ಅಂದಾಗ ಮಾತ್ರ ಸದೃಢ ನಾಳೆಗಳು ನಮ್ಮದಾಗುತ್ತವೇ 100% ಮತದಾನವು ಗದಗ ಜಿಲ್ಲೆಯ ವಾಗ್ದಾನವಾಗಿದೆ ಅದಕ್ಕೆ ಎಲ್ಲರೂ ಕೂಡಿ ಮತದಾನ ಮಾಡಿದಾಗ ಆ ವಾಗ್ದಾನ ಪೂರ್ತಿ ಆಗುತ್ತದೆ ಎಂದರು..

ಈ ಕಾರ್ಯಕ್ರಮ ದಲ್ಲಿ ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ಚುನಾವಣಾ ಅಧಿಕಾರಿಗಳಾದ ಪ್ರಶಾಂತ ವರಗಪ್ಪನವರ, ಸಹಾಯಕ ಚುನಾವಣಾ ಅಧಿಕಾರಿಗಳಾದ ಶ್ರೀಮತಿ ವಾಣಿ ಊಂಕಿ, ರಜನಿಕಾಂತ ಕೆಂಗೇರಿ, ರೋಣ ಸಿಪಿಐ ಶಿವಾನಂದ ವಾಲಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಾಯತ್ರಿ ಸಜ್ಜನರ, ಸಿಡಿಪಿಓ ಬಿ.ಎಮ್ ಮಾಳೆಕೊಪ್ಪ ಹಾಗೂ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕ ರೀಯಾಜ ಖತೀಬ್ ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ನಾಯಕ , ಹಾಗೂ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತ್‌ ಸಿಬ್ಬಂದಿ, ಗ್ರಾಮ ಪಂಚಾಯತ್‌ ನೌಕರರು ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು....

*ಬಾಕ್ಸ್‌*  ಕಡ್ಡಾಯ ಮತದಾನಕ್ಕಾಗಿ ಸಾಂಪ್ರದಾಯಿಕ ನಡಿಗೆ ಜಾಥಾ ಉದ್ದಕ್ಕೂ ಮತದಾನ ಜಾಗೃತಿಗಾಗಿ ಪಟ್ಟಣದ ಮಾರ್ಕೆಟ್ಟಿನಲ್ಲಿರುವ ಹಲವಾರು ಅಂಗಡಿಗಳಿಗೆ CEO ಅವರು ಭೇಟಿ ನೀಡಿ ಅಂಗಡಿಗಳ ಮಾಲಿಕರಿಗೆ ಹಾಗೂ ಗ್ರಾಹಕರಿಗೆ ತಪ್ಪದೇ ಮತದಾನ ಮಾಡುವಂತೆ ತಿಳಿಸಿ ಜಾಗೃತಿ ಮೂಡಿಸಿದರು. ಇನ್ನು ಬಸ್ ತಡೆದು ಬಸ ನಲ್ಲಿದ್ದ ಜನರಿಗೆ ಉಭಯಕುಶಲೋಪರಿ ವಿಚಾರಿಸಿ ತಪ್ಪದೇ ಮತದಾನ ಮಾಡುವಂತೆ ತಿಳುವಳಿಕೆ ಮೂಡಿಸಿದ್ದು ಎಲ್ಲರ ಪ್ರೀತಿಗೆ ಪಾತ್ರವಾಯಿತು...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net