

ಉಗರಗೋಳ: ಶ್ರಾವಣ ಮಾಸದ ಅಂಗವಾಗಿ ಮಠ&ಮಂದಿರಗಲ್ಲಿ ನಡೆಯುವ ಸತ್ಸಂಗಗಳಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಮನದ ಕಲ್ಮಶ ಕಳೆದುಕೊಳ್ಳಬೇಕು ಎಂದು ಪಂಚಾರಿಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸವದತ್ತಿ ತಾಲೂಕಿನ ಬೆಡಸೂರ ಗ್ರಾಮದ ಪಂಚಾರಿ ಮಠದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷಿ$್ಮ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಂತ್ರಿಕ ಶಿಣ ಪಡೆಯುತ್ತಿರುವ 16 ವಿದ್ಯಾರ್ಥಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸುಜ್ಞಾನ ನಿಧಿಯಿಂದ ಶಿಷ್ಯವೇತನ ವಿತರಿಸಲಾಯಿತು. ಬೆಟಸೂರ, ಯಡ್ರಾವಿ, ಹಂಚಿನಾಳ, ಹಿರೇಕುಂಬಿ, ದಡೇರಕೊಪ್ಪ, ಚುಳಕಿ ಹಾಗೂ ಚಿಕ್ಕುಂಬಿ ಗ್ರಾಮಗಳ 800ಕ್ಕೂ ಹೆಚ್ಚು ಸ್ವ&ಸಹಾಯ ಸಂದ ಸದಸ್ಯರಿಗೆ ಉಡಿ ತುಂಬಲಾಯಿತು.
ಹನುಮಂತರಾವ್ ದಾಮೋದರ್, ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ, ಶ್ರೀಧರ ಅಸಂಗಿಹಾಳ, ವಿನೋದ ವೈದ್ಯ, ಸಾವಿತ್ರಿ ದೊಡ್ಡಮನಿ, ಶೈಲಾ ಪಾಟೀಲ, ಸದಾನಂದ ಕುರಿ, ಶಶಿಕಾಂತ ಮಾಳಿ, ನಿರ್ಮಾಲಾ ಕಳಸನಗೌಡರ, ರಾಜೇಶ್ವರಿ ಗಡೆಕರ, ಜಯಶ್ರೀ ಜಡಿ, ಅರುಣ ಪಾಟೀಲ, ಈರಣ್ಣ ಮೇಟಿ, ಸುಬ್ರಾಯ ನಾಯ್ಕ ಇತರರಿದ್ದರು.