ಬಿಜೆಪಿ ಪದಾಧಿಕಾರಿಯಿಂದ ಉರುಳು ಸೇವೆ

New BJP 456
Published on

ಹುಬ್ಬಳ್ಳಿ : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿದ್ದಕ್ಕೆ ಹಾಗೂ ಪ್ರಲ್ಹಾದ ಜೋಶಿ ಐದನೇ ಬಾರಿಗೆ ಸಂಸದರಾಗಿ, ಎರಡನೇ ಬಾರಿಗೆ ಕೇಂದ್ರ ಸಚಿವರಾಗಿದ್ದಕ್ಕೆ ಬಿಜೆಪಿ ಪದಾಧಿಕಾರಿಯೊಬ್ಬರು ನಗರದಲ್ಲಿ ಶುಕ್ರವಾರ ಉರುಳು ಸೇವೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಖಜಾಂಚಿ ಬಸವರಾಜ ಇಚ್ಚಂಗಿ ಎಂಬುವವರೇ ಉರುಳು ಸೇವೆ ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಬಡಿಗೇರ ಓಣಿಯ ತಮ್ಮ ಮನೆಯಿಂದ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನದವರೆಗೆ ಬಸವರಾಜ ಇಚ್ಚಂಗಿ ಅವರು ಉರುಳು ಸೇವೆ ಮಾಡಿದ್ದಾರೆ.

ಶಾಸಕ ಮಹೇಶ ಟೆಂಗಿನಕಾಯಿ ಅವರು ಇಚ್ಚಂಗಿ ಅವರಿಗೆ ಮಾಲಾರ್ಪಣೆ ಮಾಡಿ, ಉರುಳು ಸೇವೆಗೆ ಚಾಲನೆ ನೀಡಿದರು. ನಂತರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಬಿಜೆಪಿ ವಿಭಾಗೀಯ ಸಹ ಪ್ರಭಾರಿ ನಾರಾಯಣ ಜರತಾರಘರ, ರಾಜು ಜರತಾರಘರ, ಡಾ. ರವೀಂದ್ರ ಎಲಖಾನ, ಮಹೇಶ ಮರೆವಾಡ, ಜಗದೀಶ ನರೇಗಲ್ಲ, ದಯಾನಂದ ಕೊಂಗಿ, ನೀಲಕಂಠ ತಡಸದಮಠ, ರಾಜು ಕೋರಾಣ್ಯಮಠ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net