ಹುಬ್ಬಳ್ಳಿ: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ರೋಲರ್ ಡರ್ಬಿ ಉಚಿತ ಶಿಬಿರವನ್ನು ಸೆಪ್ಟೆಂಬರ್ 6ರಿಂದ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಸಂಘಟಿಸಿರುವ ಶಿಬಿರದಲ್ಲಿ
ಬಾಲಕ ಹಾಗೂ ಬಾಲಕಿಯರು ಪಾಲ್ಗೊಳ್ಳಬಹುದು ಎಂದು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಾಡಪ್ಪನವರ ತಿಳಿಸಿದ್ದಾರೆ.