ಭಾರತ್ 2047 ರೋಲ್ ಆಫ್ ಯೂತ್ ಪುಸ್ತಕ ಬಿಡುಗಡೆ

rrrrrrrrrrrrr
Published on



ಮಂಗಳೂರು: ಯುವ ಸಾಹಿತಿ, ವಾಗ್ಮಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರು ಬರೆದ ಭಾರತ್ 2047 ರೋಲ್ ಆಫ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾಭವನದಲ್ಲಿ ನಡೆಯಿತು.
ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿರುವ ರಿಶಲ್ ಬ್ರಿಟ್ನಿ ಅವರು ಈಗಾಗಲೇ ಎಸ್ಸೇಸ್ ಆನ್ ಕಲೆಕ್ಟಿವ್ ಟಾಪಿಕ್ಸ್ ಪುಸ್ತಕ ಬರೆದಿದ್ದಾರೆ. ಪ್ರಸ್ತುತ ಬರೆದ ಹೊಸ ಪುಸ್ತಕ 376 ಪುಟಗಳನ್ನು ಹೊಂದಿದೆ.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಅವರು, ಕಲಿಕೆ ಹಾಗೂ ಸಾಹಿತ್ಯದ ಹವ್ಯಾಸ ಎರಡರಲ್ಲೂ ಜತೆಯಾಗಿ ಯಶಸ್ಸು ಪಡೆಯುತ್ತಿರುವ ರಿಶಲ್ ಬ್ರಿಟ್ನಿ ಅವರು ವಿದ್ಯಾರ್ಥಿಗಳು ಹಾಗೂ ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರು ತನ್ನ 21ನೇ ವಯಸ್ಸಿನಲ್ಲಿ ಉತ್ತಮ ಪುಸ್ತಕವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಬಲ್ಮಠ ಸ.ಪ್ರ.ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ.ತಾರಾ ರಾವ್ ಶುಭಹಾರೈಸಿದರು.
ಮಾಜಿ ಕಾರ್ಪೊರೇಟರ್ ರಂಗನಾಥ ಕಿಣಿ, ನಿವೃತ್ತ ಶಿಕ್ಷಕ ರೊನಾಲ್ಡ್ ಫೆರ್ನಾಂಡೀಸ್, ನ್ಯಾನ್ಸಿ ಫೆರ್ನಾಂಡೀಸ್ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net