ಸ್ವಾತಂತ್ರ್ಯ ಚಳವಳಿಗಳಲ್ಲಿ ವಕೀಲರ ಪಾತ್ರ

7 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದೇಶದ ಸ್ವಾತಂತ್ರ್ಯ ಚಳವಳಿ ಸೇರಿ ಸಮಾಜಮುಖಿಯ ಎಲ್ಲ ಹೋರಾಟ ಕ್ಷೇತ್ರಗಳಲ್ಲಿ ವಕೀಲರ ಪಾತ್ರವಿದ್ದು, ಇಂದಿನ ದಿನಗಳಲ್ಲಿ ಆ ಪಾತ್ರ ಕ್ಷೀಣಿಸುತ್ತಿದೆ ಎಂದು ಕರ್ನಾಟಕ ವಿವಿ ಕಾನೂನು ನಿಖಾಯದ ಡೀನ್​ ಡಾ. ಎಂ. ವಿಶ್ವನಾಥ ಕಳವಳ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಎಂ.ಜಿ. ಅಂಗಡಿ ಸ್ಮರಣೆ ದತ್ತಿ, ವಕೀಲರ ದಿನ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾನೂನು ವೃತ್ತಿ ಅವಕಾಶಗಳು-ಸವಾಲುಗಳು ಕುರಿತು ಮಾತನಾಡಿದರು.

ಹಿರಿಯ ವಕೀಲರ ಮಾರ್ಗದರ್ಶನ, ದಿಟ್ಟ ಹೋರಾಟ ಮನೋಭಾವನೆ, ವೃತ್ತಿ, ನೈಪುಣ್ಯದಿಂದ ಕಿರಿಯ ವಕೀಲರು ವೃತ್ತಿಯಲ್ಲಿ ಮುನ್ನಡೆಯಬೇಕು. ವೃತ್ತಿಯಲ್ಲಿಯ ಸವಾಲುಗಳನ್ನು ಮೀರಿ ಬೆಳೆಯಬೇಕು. ಕಿರಿಯ ವಕೀಲರು ವೃತ್ತಿಯನ್ನು ಶಿಸ್ತು ಮತ್ತು ನೈಪುಣ್ಯತೆಯಿಂದ ಮುಂದುವರೆಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಹಿರಿಯರಿಂದ ಕಲಿಯುವುದು ಅತ್ಯವಶ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛನ್ಯಾಯಾಲಯ ಧಾರವಾಡ ಪೀಠದ ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಜೆ.ಎಂ. ಗಂಗಾಧರ ಮಾತನಾಡಿದರು.

ದತ್ತಿದಾನಿ ಎಂ.ಎಂ. ಅಗಡಿ, ವೀರಣ್ಣ ಒಡ್ಡೀನ, ಶಿವಾನಂದ ಭಾವಿಕಟ್ಟಿ, ಬಿ.ಡಿ. ಪಾಟೀಲ, ಡಾ. ವಿ.ಆರ್​. ಕಿರೇಸೂರ, ಸುರೇಶ ಅಗಡಿ, ಬಿ.ಎಸ್​. ಸಂಗಟಿ, ಸಿ.ಎಸ್​. ನಾಗಶೆಟ್ಟಿ, ಗಂಗಾಧರ ಹೊಸಕೇರಿ, ಸುನಿಲ ದೇಸಾಯಿ, ಜಿ.ಕೆ. ಹಿರೇಗೌಡರ, ರಾಜೇಶ ನಾವಲಗಿಮಠ, ಇತರರು ಇದ್ದರು.

ಬಸವಪ್ರಭು ಹೊಸಕೇರಿ ಸ್ವಾಗತಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net