

ಧಾರವಾಡ: ಪ್ರದಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ವೇದಿಕೆಯಲ್ಲಿ 9ನೇ ರೋಜಗಾರ್ ಮೇಳ ಉದ್ಘಾಟಿಸಿ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ಆಯ್ಕೆಯಾದ 51,056 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯದ ಮೈಸೂರು, ಬೆಂಗಳೂರು ಮತ್ತು ಧಾರವಾಡದಲ್ಲಿ ಕಾರ್ಯಕ್ರಮ ಜರುಗಿತು. ನಗರದ ಎಸ್‌ಡಿಎಂ ಇಂಜಿನಿಯರಿAಗ್ ಕಾಲೇಜ್ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಅಂಚೆ ವಿಭಾಗದ ಪೋಸ್ಟ್ಮಾಸ್ಟರ್ ಜನರಲ್ ಕರ್ನಲ್ ಸುಶೀಲ್‌ಕುಮಾರ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ, ಧಾರವಾಡ ಐಐಟಿ ಕುಲಸಚಿವ ಡಾ. ಬಸವರಾಜಪ್ಪ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆವಿಜಿ ಬ್ಯಾಂಕ್, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ, ಐಐಟಿ ಧಾರವಾಡ ಮತ್ತು ಅಂಚೆ ಇಲಾಖೆಗಳಿಗೆ ಹೊಸದಾಗಿ ಆಯ್ಕೆಯಾದ ೧೧೮ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಆಯ್ಕೆಯಾದ ಅಭ್ಯರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಚೆ ಸಹಾಯಕರಾದ ಎಂ.ಎ. ದಾರುಗಾರ್ ನಿರೂಪಿಸಿದರು. ಹಿರಿಯ ಅಂಚೆ ಅಧಿಕ್ಷಕ ಗೋವಿಂದರಾಜ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಸುಕುಮಾರ ನಾಯ್ಕ ವಂದಿಸಿದರು.