ರೋಹಿತ್ ಸ್ಮರಣಾರ್ಥ ಖೋ ಖೋ ಪಂದ್ಯಾವಳಿ

IMG20230905142923
Published on

ಬೋಗಾದಿಯ ಹರಿವಿದ್ಯಾಲಯದಲ್ಲಿ ಮೇಜರ್ ಧ್ಯಾನ್ ಚಂದ್ ಸಿಂಗ್ ಅವರ ಜನ್ಮದಿನ (ಕ್ರೀಡಾ ದಿನ)ದ ಅಂಗವಾಗಿ ರೋಹಿತ್ ಸ್ಮರಣಾರ್ಥ ಖೋ ಖೋ
ಪಂದ್ಯಾವಳಿ' ಸಿಬಿಎಸ್ಸಿ, ಐಸಿಎಸ್ಇ ಅಂತರ್ ಶಾಲಾ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

21 CBSE ಶಾಲಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕರ್ನಾಟಕ ಅಮೆಚೂರ್ ಖೋ ಖೋ ಸಂಸ್ಥೆ
ಕಾರ್ಯದರ್ಶಿ ಚಿನ್ನಮೂರ್ತಿ ಮುಖ್ಯ ಅತಿಥಿಯಾಗಿ ಸಮಾರಂಭಕ್ಕೆ ಆಗಮಿಸಿ ಸ್ಪರ್ಧಿಗಳಿಗೆ ದೈಹಿಕ ಆರೋಗ್ಯವನ್ನು
ವೃದ್ದಿಸಿಕೊಳ್ಳಲು ಕ್ರೀಡೆಯ ಮಹತ್ವವನ್ನು ತಿಳಿಸಿಕೊಟ್ಟರು.

ಅಲ್ಲದೆ ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ 'ಮಾಡ್ರನ್ ಖೋ ಖೋ' ಎಂಬ ಹೆಸರಿನ ಮೂಲಕ ಮ್ಯಾಟ್ ಮೇಲೆ ಪಂದ್ಯಾವಳಿಯನ್ನು ಆಡಿಸಿದ ಹೆಗ್ಗಳಿಕೆ ಹರಿ ವಿದ್ಯಾಲಯ ಸಂಸ್ಥೆಗೆ ಸಲ್ಲುತ್ತದೆ ಎಂದು ಶ್ಲಾಘನೆ ಮಾಡಿದರು.

ಸಮಾರಂಭದ ಉದ್ಘಾಟನೆಯನ್ನು ವಿಶೇಷ ರೀತಿಯಲ್ಲಿ ಕ್ರೀಡಾಪಂಜನ್ನು ಬೆಳಗಿಸುವುದರ ಮೂಲಕ ಶ್ರೀಯುತ ಶ್ರೀನಿವಾಸ್ ಹೊಸಮನೆ, ಕಾರ್ಯದರ್ಶಿಗಳು, ಶಾಲೆಯ ಪ್ರಾಂಶುಪಾಲರಾದ ಡಾ. ಎನ್ .ಭಾರತೀ ಶಂಕರ್ ನೆರವೇರಿಸಿದರು.

ಈ ಸಂದರ್ಭದಲ್ಲಿ 21 ಶಾಲೆಯ ತಂಡದ ತರಬೇತಿದಾರರು ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕಿಯರ ತಂಡದಲ್ಲಿ ಪ್ರಥಮ ಬಹುಮಾನ ಈಶ್ವರ್ ವಿದ್ಯಾಲಯ, ದ್ವಿತೀಯ ಬಹುಮಾನ ಶಿಷ್ಕರಣಿ ಶಾಲೆ ಮತ್ತು ತೃತೀಯ ಬಹುಮಾನವನ್ನು ಹರಿ ವಿದ್ಯಾಲಯ ಶಾಲೆಯು ಪಡೆದುಕೊಂಡಿತು. ಬಾಲಕರ ತಂಡದಲ್ಲಿ ಪ್ರಥಮ ಬಹುಮಾನ ಹರಿವಿದ್ಯಾಲಯ, ದ್ವಿತೀಯ ಬಹುಮಾನ ಈಶ್ವರ್ ವಿದ್ಯಾಲಯ ಮತ್ತು ಈಸ್ಟ್ ವೆಸ್ಟ್ ಇಂಟರ್ನ್ಯಾಷನಲ್ ಶಾಲೆಯು ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net