

ಮದಭಾವಿ: ಯುವಜನರು ಸಂತ ಶಿರೋಮಣಿ ರೋಹಿದಾಸ ಮಹಾರಾಜ ಆಚಾರ-ವಿಚಾರ ಅಳವಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಕೋರೆ ಹೇಳಿದರು.
ಗ್ರಾಮದಲ್ಲಿ ಸಂತ ರೋಹಿದಾಸ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೋಹಿದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಹಿದಾಸರು ಸಮಾಜಕ್ಕೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಅವರ ಆದರ್ಶ ಎಲ್ಲರಿಗೂ ಮಾದರಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಾಯಕ ಬಾಗಡಿ, ಖಂಡೆರಾವ ಘೊರ್ಪಡೆ, ಸಂಜಯ ಅದಾಟೆ, ಕೃಷ್ಣಾಜಿ ಶಿಂಧೆ, ರಾವಸಾಹೇಬ ಕರೆಣ್ಣವರ, ರವಿ ಅಜೆಟರಾವ, ಜೋತಿಭಾ ಶಿಂಧೆ, ಮಹಾದೇವ ಕಾಂಬಳೆ, ಕೇಶವ ಭಂಡಾರೆ, ಶಂಕರ ಕೊಡತೆ, ಪ್ರವೀಣ ಭಂಡಾರೆ, ಮಹಾದೇವ ಹೊನಕಾಂಡೆ ಹಾಗೂ ಇತರರು ಇದ್ದರು.