ಮೂಟ್ ಕೋರ್ಟ್‌ನಲ್ಲಿ ರೋಹನ್ ಗಂಗಡ್ಕರ್ ತಂಡ ಪ್ರಥಮ

20
Published on

ಮೈಸೂರು: ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಕಲ್ಪಿತ (ಮೂಟ್) ಕೋರ್ಟ್ ಸ್ಪರ್ಧೆಯಲ್ಲಿ ವಿದ್ಯಾರ್ಥಿ ರೋಹನ್ ಗಂಗಡ್ಕರ್ ತಂಡ ಪ್ರಥಮ ಬಹುಮಾನ ಪಡೆದಿದೆ.

ಕೌಟುಂಬಿಕ ನ್ಯಾಯಾಲಯದ ಎರಡನೇ ಹೆಚ್ಚುವರಿ ನ್ಯಾಯಾಧೀಶ ಟಿ. ಶ್ರೀನಿವಾಸ್, ಕಾರ್ಮಿಕ ನ್ಯಾಯಾಲಯದ ಪ್ರೆಸಿಡಿಂಗ್ ಅಧಿಕಾರಿ ರವಿಕಾಂತ್, ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಅವರ ಸಮ್ಮುಖದಲ್ಲಿ ಸ್ಪರ್ಧೆ ನಡೆಸಲಾಯಿತು.

ಸ್ಪರ್ಧೆಯಲ್ಲಿ ರೋಹನ್ ಗಂಗಡ್ಕರ್, ಅನನ್ಯ ಹಾಗೂ ಲಿಸಾ ಅವರು ಪ್ರಥಮ ಬಹುಮಾನ ಪಡೆದುಕೊಂಡರು. ಪ್ರಾರ್ಥನಾ, ದೀಪಿಕಾ ಜೋಶಿ ಹಾಗೂ ಅಫ್ರಿನ್ ತಾಜ್ ಅವರ ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ.

ಉತ್ತಮ ಸಂಶೋಧನೆ ಸೀನಿಯರ್ ವಿಭಾಗದಲ್ಲಿ ರೋಹನ್‌ಗಂಗಡ್ಕರ್ ಜ್ಯೂನಿಯರ್ ವಿಭಾಗದಲ್ಲಿ ದಿವ್ಯಾ ವಿಶೇಷ ಪ್ರಶಸ್ತಿ ಪಡೆದರು. ಉತ್ತಮ ಸ್ಪೀಕರ್ ಪ್ರಶಸ್ತಿ ಲಿಶಾ ಹಾಗೂ ಪ್ರಿಶಾ ಗ್ಲೋರಿಯ ಪಡೆದುಕೊಂಡರು.

ಬೆಸ್ಟ್ ಮೆಮೋರಿಯಲ್ ಪ್ರಶಸ್ತಿಗೆ ರೋಹನ್ ವಿ ಗಂಗಡ್ಕರ್, ಲಿಶಾ ಹಾಗೂ ಅನನ್ಯ ಭಾಜನರಾದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಕಾನೂನು ಕಾಲೇಜಿನ ಪ್ರೊ.ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net