ರೋಹನ್ ಕಾರ್ಪೋರೇಷನ್ 32ನೇ ವರ್ಷಕ್ಕೆ ಪದಾರ್ಪಣೆ

mng-13jan-rohan (4)
Published on



ಮಂಗಳೂರು : ಉದ್ಯಮ ಕ್ಷೇತ್ರದಲ್ಲಿ ಲಾಭ ಗಳಿಕೆಯ ಜತೆಗೆ ಸೇವೆಯ ಮನೋಭಾವವೂ ಇರಬೇಕು. ಪಾರದರ್ಶಕ ವ್ಯವಹಾರ ಹಾಗೂ ವಿಶ್ವಾಸಾರ್ಹ ಸೇವೆ ನೀಡಿದ ಕಾರಣ ರೋಹನ್ ಕಾರ್ಪೋರೇಷನ್ ಇಂಡಿಯಾ ಇಂದು ನಿರ್ಮಾಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದೆ. ಕಳೆದ ಮೂರು ದಶಕದಲ್ಲಿ 30ಕ್ಕೂ ಅಧಿಕ ಯೋಜನೆಗಳನ್ನು ಪೂರ್ಣಗೊಳಿಸಿ ಸಂತೃಪ್ತ ಗ್ರಾಹಕರನ್ನು ಹೊಂದಿರುವ ರೋಹನ್ ಕಾರ್ಪೋರೇಷನ್ ಭವಿಷ್ಯದಲ್ಲಿ ರೋಹನ್ ಸಿಟಿ, ರೋಹನ್ ಸ್ಕಾೃರ್, ರೋಹನ್ ಮಾಲ್ ಸಹಿತ 22 ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ ಎನ್ನುತ್ತಾರೆ ಸಂಸ್ಥೆಯ ಚೇರ್ಮನ್ ರೋಹನ್ ಮೊಂತೆರೊ ಅವರು.
1994ರಲ್ಲಿ ಯುವ ಉದ್ಯಮಿ ರೋಹನ್ ಮೊಂತೆರೊ ಮಂಗಳೂರಿನಲ್ಲಿ ಸ್ಥಾಪಿಸಿದ ರೋಹನ್ ಕಾರ್ಪೋರೇಷನ್ ಇಂಡಿಯಾ 31 ಯಶಸ್ವಿ ವರ್ಷಗಳನ್ನು ಪೂರೈಸಿ 32ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಸಂಸ್ಥೆಯ ಯೋಜನೆಗಳು ಇಂದು ಕರ್ನಾಟಕವನ್ನು ದಾಟಿ ಪ್ಯಾನ್ ಇಂಡಿಯಾಕ್ಕೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ರೋಹನ್ ಮೊಂತೆರೊ ಅವರ ಜತೆ ‘ವಿಜಯವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.
* ಮೂರು ದಶಕದ ಹಿಂದೆ ರಿಯಲ್ ಎಸ್ಟೇಟ್ ಉದ್ಯಮ ಪ್ರವೇಶಿಸುವಾಗ ಇಷ್ಟು ದೊಡ್ಡ ಯಶಸ್ಸಿನ ನಿರೀಕ್ಷೆ ಇತ್ತಾ ?
ಜೀವನೋಪಾಯಕ್ಕಾಗಿ ಹಲವು ವೃತ್ತಿ ನಡೆಸಿದ ಬಳಿಕ ಅಂತಿಮವಾಗಿ ರಿಯಲ್ ಎಸ್ಟೇಟ್ ಉದ್ಯಮ ಪ್ರವೇಶಿಸಿದೆ. ಆರಂಭದ ದಿನಗಳಲ್ಲಿ ಸಂಪಾದನೆಯೇ ಗುರಿಯಾಗಿತ್ತು. ಆದರೆ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸೇವೆ ನೀಡುವುದು ಅಗತ್ಯ ಎನ್ನುವ ಅರಿವು ಮೂಡಿತು. ಎಲ್ಲ ವರ್ಗದ ಜನರ ಸ್ವಂತ ಸೂರು ಹೊಂದುವ ಕನಸು ನನಸಾಗಬೇಕು ಎನ್ನುವ ಉದ್ದೇಶದಿಂದ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ. ಪ್ರಾಮಾಣಿಕ ಸೇವೆ ಮತ್ತು ಪರಿಶ್ರಮದಿಂದ ಈ ಹಂತದ ಯಶಸ್ಸು ಸಾಧ್ಯವಾಗಿದೆ.
* ಗ್ರಾಹಕರ ವಿಶ್ವಾಸ ಗಳಿಸುವುದು ಹೇಗೆ ಸಾಧ್ಯವಾಯಿತು ?
ಮನೆ ಎಲ್ಲರಿಗೂ ಬೇಕು. ಗ್ರಾಹಕರ ಅಭಿರುಚಿ, ಖರೀದಿ ಸಾಮರ್ಥ್ಯ ಅರಿತು. ಕೇವಲ ಲಾಭ ಗಳಿಕೆಗೆ ಸೀಮಿತವಾಗದೆ ಮಿತದರದಲ್ಲಿ ಫ್ಲಾೃಟ್ ಹಾಗೂ ನಿವೇಶನಗಳನ್ನು ಒದಗಿಸುತ್ತಿದ್ದೇವೆ. ಖರೀದಿ ಒಪ್ಪಂದ, ನೋಂದಣಿ, ಫ್ಲಾೃಟ್ ಹಸ್ತಾಂತರ ..ಈ ಎಲ್ಲ ಹಂತದಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತೇವೆ. ಕಟ್ಟಡ ಪೂರ್ಣಗೊಳ್ಳುವಾಗ ಎಲ್ಲ
ರೀತಿಯ ಮೂಲಸೌಕರ್ಯ ಒದಗಿಸಿ ಖರೀದಿ ಮಾಡಿದವರಿಗೆ ಭವಿಷ್ಯದಲ್ಲಿ ಸಮಸ್ಯೆಯಾಗದಂತೆ ಎಚ್ಚರ ವಹಿಸಿದ್ದೇವೆ. ಒಟ್ಟಿನಲ್ಲಿ ಗುಣಮಟ್ಟದ ಸೇವೆಯಿಂದಾಗಿ ಗ್ರಾಹಕರ ವಿಶ್ವಾಸ ಗಳಿಸುವುದು ಸಾಧ್ಯವಾಗಿದೆ.
* ಮಂಗಳೂರಿನಲ್ಲಿ ಸಾಕಷ್ಟು ಫ್ಲಾೃಟ್‌ಗಳು ನಿರ್ಮಾಣವಾಗುತ್ತಿವೆ. ಇಲ್ಲಿ ಅಷ್ಟೊಂದು ಅವಕಾಶ ಇದೆಯಾ ?
ಕರಾವಳಿಯವರು ದುಬೈ, ಮುಂಬೈ, ಬೆಂಗಳೂರು ..ಎಲ್ಲೇ ಇದ್ದರೂ ಮಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಪ್ರಾಕೃತಿಕ ಸಂಪನ್ಮೂಲ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆ ಹೊಂದಿರುವ ಮಂಗಳೂರಿನಲ್ಲೇ ಅವರು ಮನೆ ಹೊಂದಲು ಬಯಸುತ್ತಾರೆ. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಉದ್ಯೋಗ, ಉದ್ಯಮ ಹಾಗೂ ಹೂಡಿಕೆಗೆ ಈಗ ಮಂಗಳೂರು ನಗರ ಜನತೆಯ ಆಯ್ಕೆಯಾಗಿದೆ. ಹಾಗಾಗಿ ಇಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ವಿಪುಲ ಅವಕಾಶವಿದೆ.
*ನಿಮ್ಮ ಸಂಸ್ಥೆಯ ಅತ್ಯಪೂರ್ವ ಯೋಜನೆ ರೋಹನ್ ಸಿಟಿ ಸದ್ಯ ಯಾವ ಹಂತದಲ್ಲಿದೆ ?
ಮಂಗಳೂರಿನ ಬಿಜೈಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಒಳಗೊಂಡಿರುವ ಅಂತಾರಾಷ್ಟ್ರೀಯ ದರ್ಜೆಯ ರೋಹನ್ ಸಿಟಿಯು ರೋಹನ್ ಕಾರ್ಪೊರೇಷನ್ ಸಂಸ್ಥೆಯ ಅತ್ಯಂತ ವಿಶೇಷ ಯೋಜನೆಯಾಗಿದೆ. 8.5 ಲಕ್ಷ ಚದರ ಅಡಿ ವಿಸ್ತೀರ್ಣದ ಸಮುಚ್ಛಯ ಇದಾಗಿದ್ದು, ಒಟ್ಟು 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಈಗಾಗಲೇ ಶೇ.95ರಷ್ಟು ಫ್ಲಾೃಟ್‌ಗಳು ಮಾರಾಟವಾಗಿದೆ. ವಾಣಿಜ್ಯ ಮಳಿಗೆಗಳು ಕೂಡಾ ಬಹುತೇಕ ಮಾರಾಟವಾಗಿದೆ. ವರ್ಷಾಂತ್ಯಕ್ಕೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
* ಭವಿಷ್ಯದ ಯೋಜನೆಗಳ ಬಗ್ಗೆ ..?
ಸಂಸ್ಥೆಯ 22 ಯೋಜನೆಗಳು ಸದ್ಯ ಪ್ರಗತಿಯಲ್ಲಿವೆ. ಈ ಯೋಜನೆಗಳು ಪೂರ್ಣಗೊಂಡಾಗ ಸುಮಾರು 4 ಸಾವಿರ ಮನೆಗಳು
ಲಭ್ಯವಾಗಲಿದೆ. ಮಂಗಳೂರಿನ ಕಪಿತಾನಿಯೋ ಬಳಿ 6.50 ಲಕ್ಷ ಚದರ ಅಡಿಯ ರೋಹನ್ ಸ್ಕ್ವೇರ್ ನಿರ್ಮಾಣ ಅಂತಿಮ ಹಂತದಲ್ಲಿದೆ. ಅಂತಾರಾಷ್ಟ್ರೀಯ ಮಟ್ಟದ ಹೋಟೆಲ್ ಈ ಸಂಕೀರ್ಣದಲ್ಲಿ ಆರಂಭವಾಗಲಿದೆ. ಸುರತ್ಕಲ್‌ನಲ್ಲಿ ಕಡಲ ಕಿನಾರೆ ಸಮೀಪ ರೋಹನ್ ಮರೀನಾ ಹೆಸರಿನ ಅತ್ಯಪೂರ್ವ ವಸತಿ ಸಂಕೀರ್ಣ ನಿರ್ಮಾಣವಾಗಲಿದೆ. ನೀರುಮಾರ್ಗ ಮತ್ತು ಕುಲಶೇಖರದಲ್ಲಿ ರೋಹನ್ ಎಸ್ಟೇಟ್, ಮುಕ್ಕದಲ್ಲಿ ರೆಸಾರ್ಟ್ ಶೈಲಿಯ ವಸತಿ ಬಡಾವಣೆ ರೋಹನ್ ಎಸ್ಟೇಟ್ ನಿರ್ಮಾಣ ಹಂತದಲ್ಲಿದೆ.
ರೋಹನ್ ಕಾರ್ಪೊರೇಶನ್ ಸಂಸ್ಥೆ ಮೈಸೂರು, ಬೆಂಗಳೂರಿನಲ್ಲಿ ವಸತಿ ಯೋಜನೆ ಆರಂಭಿಸಿದ್ದು, ಪ್ಯಾನ್ ಇಂಡಿಯಾಕ್ಕೂ
ವಿಸ್ತರಣೆಯಾಗುತ್ತಿರುವುದು ಹೆಮ್ಮೆ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net