ಗೋಕಾಕಕ್ಕೆ ಡಿಸಿ ಭೇಟಿ; ರಸ್ತೆ ದುರಸ್ತಿ ಕಾಮಗಾರಿ ಆರಂಭ

20250820_113048.heic
Published on

ಬೆಳಗಾವಿ: ಗೋಕಾಕ ನಗರಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಭೇಟಿ ನೀಡುತ್ತಿದ್ದಂತೆ ಬಹುದಿನಗಳಿಂದ ದುರಸ್ತಿಗಾಗಿ ಕಾಯುತ್ತಿದ್ದರಸ್ತೆ ಗುಂಡಿಗಳನ್ನು ಮುಚ್ಚುವ ಭಾಗ್ಯ ದೊರೆತಿದೆ.ಕಳೆದ ಒಂದು ತಿಂಗಳಿಂದ ರಸ್ತೆ ಗುಂಡಿ, ಚರಂಡಿ ದುರಸ್ತಿಗೊಳಿಸುವಂತೆ ಮೇಲಿಂದ ಮೇಲೆ ವಿನಂತಿಸಿದರು ಅಧಿಕಾರಿಗಳು ಸ್ಪಂದಿಸಲಿಲ್ಲ. ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಭೇಟಿ ನೀಡಿರುವ ಹಿನ್ನೆಲೆ ದುರಸ್ತಿ ಕಾಮಗಾರಿ ಆರಂಭ ಗೊಂಡಿದೆ. ವಾರದಕ್ಕೊಮ್ಮೆ ಆದರೂ, ಜಿಲ್ಲಾಧಿಕಾರಿ ನಗರಕ್ಕೆ ಭೇಟಿ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net