ಬಂಡೆ ಬಸವೇಶ್ವರ-ಶಿವಶರಣೆ ನೀಲಮ್ಮ ರಥೋತ್ಸವ

17 KAMPLI 01 (SPONCER COPIES NEWS)
ನಂ.10ಮುದ್ದಾಪುರದ ಬಂಡೆ ಬಸವೇಶ್ವರ
Published on

ಕಂಪ್ಲಿ: ತಾಲೂಕಿನ ನಂ.10ಮುದ್ದಾಪುರ ಬಂಡೆ ಬಸವೇಶ್ವರ ಮತ್ತು ಶಿವಶರಣೆ ನೀಲಮ್ಮ ಅವರ ರಥೋತ್ಸವ ಸೋಮವಾರ ಜರುಗಲಿದೆ.

ದೇವಸ್ಥಾನ 150ವರ್ಷಗಳಷ್ಟು ಹಳೆಯದಾಗಿದ್ದು ವಿಶೇಷ ಕ್ಷೇತ್ರವಾಗಿದೆ. ಬಂಡೆ ಮೇಲೆ ಬಸವಣ್ಣ ಮೂಡಿದ್ದರಿಂದ ಬಂಡೆ ಬಸವೇಶ್ವರನೆಂಬ ಹೆಸರಿದ್ದು, ಗದ್ದುಗೆ ನಿರ್ಮಿಸಿ ಶಿಲಾಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ನೀಲಮ್ಮ ಮೂಲತಃ ಸಿಂಧಿಗೇರಿ ಶಿವಶರಣೆಯಾಗಿದ್ದು, ಬಂಡೆ ಬಸವೇಶ್ವರನ ದರ್ಶನಕ್ಕೆ ಬಂದು ನೆಲೆನಿಂತರು. ತಲೆ ಒಣಗಿಸಿಕೊಳ್ಳುವ ವೇಳೆ ಆಕೆಯನ್ನು ನೋಡಿದ್ದರಿಂದ ಅದೃಶ್ಯಳಾಗಿ ತಂಗಡಿಗೆಗೆ ಹೋಗಿ ನೆಲೆ ನಿಂತಳು. ನಿತ್ಯ ಗೂಳಿಯೊಂದಿಗೆ ದರ್ಶನ ಪಡೆಯಲು ನೀಲಮ್ಮ ಬರುವರು ಎಂಬ ನಂಬಿಕೆ ಇದೆ. 2012ರಲ್ಲಿ ಬನಗಾನಪಲ್ಲಿಯಿಂದ ತಂದ ಶಿವಶರಣೆ ನೀಲಮ್ಮ ಪ್ರತಿಮೆ ಮಠದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಕುರುಗೋಡಿನ ನೀಲಮ್ಮನ ದೇವಸ್ಥಾನದಿಂದ ಗಂಗೆ ತಂದು ಮುದ್ದಾಪುರ ಬಳಿ ಮೂಕಬಸವಣ್ಣ ಗುಡಿಯಲ್ಲಿ ಭಾನುವಾರ ಇಟ್ಟಿರುತ್ತಾರೆ. ನೀಲಮ್ಮನ ಗಂಗೆಯನ್ನು ಸೋಮವಾರ ಗೌಳೇರು ಪೇಟೆಗೆ ತಂದು, ಬಸವೇಶ್ವರನ ಗಂಗೆಸ್ಥಳ ಮೆರವಣಿಗೆ ಮಾಡಿ, ಪೂಜಿಸಲಾಗುವುದು. ಸಂಜೆ ರಥೋತ್ಸವ ನಡೆಯುತ್ತದೆ. 2015ರಲ್ಲಿ ಹೊಸ ರಥ ನಿರ್ಮಿಸಲಾಗಿದೆ.

ಬಸವೇಶ್ವರ, ನೀಲಮ್ಮ ಮಠದಲ್ಲಿ ಪ್ರತಿ ನವರಾತ್ರಿಯಲ್ಲಿ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ, ಶ್ರಾವಣದ ಕಡೆ ಸೋಮವಾರ ರಥೋತ್ಸವ ನಡೆಯುತ್ತದೆ.

ಮಠದಲ್ಲಿ ಪುರಾತನ ಬಾವಿಯಿದ್ದು ಎಂದೂ ಬತ್ತಿಲ್ಲ. ಶಿಲೆಯ ಹೌಜಿದ್ದು ಅದರಲ್ಲಿನ ನೀರನ್ನೇ ಶಿವಶರಣೆ ನೀಲಮ್ಮ ಸ್ನಾನಕ್ಕೆ ಬಳಸಲಾಗುತ್ತದೆ. ಬರ ಬಿದ್ದಾಗ, ಹೌಜಿನ ನೀರಲ್ಲಿ ಬಾಲ ಮಕ್ಕಳಿಗೆ ಸ್ನಾನ ಮಾಡಿಸಿ, ಬಸವೇಶ ನೀಲಮ್ಮನಿಗೆ ಪೂಜೆ ಸಲ್ಲಿಸಿದರೆ ಸಮೃದ್ಧ ಮಳೆಯಾಗುತ್ತದೆ ಎಂದು ಗ್ರಾಪಂ.ಮಾಜಿ ಸದಸ್ಯರಾದ ಜೀರು ಮಲ್ಲಪ್ಪ, ಬಳೆ ನಂದಿನಿ ಮಲ್ಲಿಕಾರ್ಜುನ ತಿಳಿಸುತ್ತಾರೆ.

ಮಠ, ದೇವಸ್ಥಾನಗಳ ಕಾರ್ಯಕ್ರಮ ನೆರವೇರಿಸಲಿಕ್ಕಾಗಿ ಶ್ರೀ ಬಂಡೆ ಬಸವೇಶ್ವರ, ಶಿವಶರಣೆ ನೀಲಮ್ಮದೇವಿ ಸೇವಾ ಸಂಘದ ಗೌರವಾಧ್ಯಕ್ಷ ಎಚ್.ಎಂ.ಶರಣಯ್ಯಸ್ವಾಮಿ, ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಪದಾಧಿಕಾರಿಗಳಾದ ಜೀರ್ ದೇವರಾಜ, ಆರ್.ರಾಜಶೇಖರಗೌಡ, ಬೂದಗುಂಪ ಮುರುಡ ಬಸವರಾಜ, ಸಿ.ಎಂ.ಚಂದ್ರಶೇಖರಯ್ಯ, ಬಸವರಾಜ ಪತ್ತಾರ್, ಎಸ್.ಸಿದ್ದಪ್ಪ, ಆರ್.ಸೋಮಲಿಂಗಮೂರ್ತಿ, ಗಾರೆ ಸೋಮಶೇಖರ್, ಸದಸ್ಯರು ಸೇವಾನಿರತರಾಗಿದ್ದಾರೆ.

ಬಂಡೆ ಬಸವೇಶ್ವರ, ಶಿವಶರಣೆ ನೀಲಮ್ಮ ತಾಯಿ ಗ್ರಾಮದ ಆರಾಧ್ಯದೈವವಾಗಿದ್ದು ಸರ್ವರ ಹಿತ ಕಾಪಾಡುತ್ತಾರೆ. ರಾಜ್ಯದ ನಾನಾ ಕಡೆಗಳಿಂದ ಸದ್ಭಕ್ತರು ಆಗಮಿಸಿ ಬೇಡಿದ ಇಷ್ಟಾರ್ಥ ಈಡೇರಿಸಿಕೊಳ್ಳುತ್ತಿದ್ದಾರೆ. ಸರ್ವ ಸಮುದಾಯದವರು ನಡೆದುಕೊಳ್ಳುವ ಜಾಗೃತ ಕ್ಷೇತ್ರವಾಗಿದೆ. ಬಳೆ ಮಲ್ಲಿಕಾರ್ಜುನ ನಂ.10 ಮುದ್ದಾಪುರ ಬಂಡೆ ಬಸವೇಶ್ವರ ಮತ್ತು ಶಿವಶರಣೆ ನೀಲಮ್ಮದೇವಿ ಸೇವಾ ಸಂಘ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net