ಭವಿಷ್ಯದಲ್ಲಿ ರೊಬೋಟ್​ಗಳ ಕಾರುಬಾರು ಹೆಚ್ಚಳ

BIT
Published on

ಬೆಂಗಳೂರು: ಭವಿಷ್ಯದಲ್ಲಿ ರೊಬೋಟ್​ಗಳ ಕಾರುಬಾರು ಹೆಚ್ಚಾಗಲಿವೆ.ಕೃತಕ ಬುದ್ಧಿಮತ್ತೆಯಿಂದ ಪಡೆದ ತಾಂತ್ರಿಕ ಶಿಕ್ಷಣ ಕಾರ್ಯಮತೆ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಮೈಂಡ್​ ಟ್ರೀ ಕಂಪನಿಯ ಮಾಜಿ ಕಾರ್ಯಕಾರಿ ಉಪಾಧ್ಯಕ್ಷ ಎನ್​.ಎಸ್​.ಪಾರ್ಥಸಾರಥಿ ಹೇಳಿದ್ದಾರೆ.

ಬೆಂಗಳೂರು ತಾಂತ್ರಿಕ ವಿಶ್ವವಿದ್ಯಾಲಯ (ಬಿಐಟಿ) ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಇಂದು ಕಲಿತ ತಾಂತ್ರಿಕತೆ ನಾಳೆ ಹಳೆಯದಾಗಬಹುದು. ಹೊಸದನ್ನು ಕಲಿಯುವ ಆಸಕ್ತಿ ಇರಬೇಕು. ಕೃತಕ ಬುದ್ಧಿಮತ್ತೆ ಹೆಚ್ಚು ಬಳಕೆಯಾಗುವ ಇಂದಿನ ಯುಗದಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳುವ ಮೂಲಕ ಜೀವನದ ಪ್ರಗತಿ ಪಥದಲ್ಲಿ ಸಾಗಬೇಕು. ವೃತ್ತಿಯಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಹೊಸ ಪದವೀಧರರು ಸಜ್ಜಾಗಬೇಕು. ಸಾಮಾಜಿಕ ಜವಾಬ್ದಾರಿ ಅರಿತು ಬಡವರಿಗೆ ಕೈಲಾದ ಸಹಾಯ ಮಾಡಬೇಕು.ತಮ್ಮ ವೃತ್ತಿಯ ಬಗ್ಗೆ ಎಂದಿಗೂ ಆಸಕ್ತಿ ಕಳೆದುಕೊಳ್ಳಬಾರದು. ಉತ್ತಮ ಸ್ಥಾನಕ್ಕೆ ತಲುಪಲು ಕಾರಣರಾದ ಪಾಲಕರು, ಶಿಕ್ಷಕರ ಬಗ್ಗೆ ಧನ್ಯತಾಭಾವ ಹೊಂದಬೇಕು ಎಂದರು.

ಬಿಐಟಿ ಪ್ರಾಂಶುಪಾಲ ಡಾ.ಎಂ.ಯು.ಅಶ್ವತ್ಥ್​ ಮಾತನಾಡಿ, ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಹೇರಳ ಅವಕಾಶವಿದೆ. ಶ್ರದ್ಧೆಯಿಂದ ಉದ್ಯೋಗ ಪಡೆಯಲು ಪದವೀಧರರು ಶ್ರಮಿಸಬೇಕು ಎಂದರು.ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಮಾತನಾಡಿ ಜ್ಷಾನ, ಕೌಶಲ ಸಮಾಜದ ಉನ್ನತಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪದವಿ, ಸ್ನಾತಕೋತ್ತರ ಪದವಿ ಸೇರಿ ವಿವಿಧ ಕೋರ್ಸ್​ ಮುಗಿಸಿದ 1,200 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಸಂಘದ ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡ, ಉಪಾಧ್ಯಕ್ಷ ಸಿ. ದೇವರಾಜು, ಖಜಾಂಚಿ ಸಿ.ಎಂ.ಮಾರೇಗೌಡ, ಸಹಾಯಕ ಕಾರ್ಯದರ್ಶಿ ವೆಂಕಟರಾಮೇಗೌಡ, ಬಿಐಟಿ ಆಡಳಿತ ಮಂಡಳಿ ಅಧ್ಯ ಎಸ್​.ಕೆ.ಧಮೇರ್ಶ್​ ಸಿರಿಬೈಲ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net