ರೋಬಾಟಿಕ್ಸ್ ವಲಯದಲ್ಲಿ ವಿಫುಲ ಅವಕಾಶ

24Anand7
ಬೆಳಗಾವಿ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಪ್ರಭು, ಡಾ.ಎ್.ವಿ.ಮಾನ್ವಿ, ಡಾ.ಬಿ.ಆರ್.ಪಟಗುಂಡಿ ಇತರರಿದ್ದರು.
Published on

ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೈಗಾರಿಕೆ ಹಾಗೂ ರೋಬಾಟಿಕ್ಸ್ ವಲಯದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಬೆಂಗಳೂರಿನ ಇನ್‌ಕ್ಯಾಂಟೋ ಡೈನಾಮಿಕ್ಸ್ ಸಂಸ್ಥೆ ಸಿಇಒ ಶ್ರೀನಿವಾಸ ಪ್ರಭು ಹೇಳಿದರು.

ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಡಸ್ಟ್ರಿಯಲ್ ಆಟೋಮೇಷನ್, ರೋಬಾಟಿಕ್ಸ್, ಎಐ ಮತ್ತು ಎಲ್‌ಒಟಿ ಕುರಿತು ಈಚೆಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮೂಲಕ ಅಗತ್ಯ ಕೌಶಲ ರೂಢಿಸಿಕೊಂಡು ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಸ್ಥೆ ಅಧ್ಯಕ್ಷ ಡಾ.ಎ್.ವಿ.ಮಾನ್ವಿ, ಪ್ರಾಚಾರ್ಯ ಡಾ.ಬಿ.ಆರ್. ಪಟಗುಂಡಿ, ಡಾ.ಡಿ.ಎಚ್.ರಾವ್, ಡಾ.ಕೆ.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net