ಹುಬ್ಬಳ್ಳಿಯಲ್ಲಿ ರಾಬರ್ಟ್ ಆರ್ಭಟ

h28-Robert 3
Published on

ಹುಬ್ಬಳ್ಳಿ: ನಗರದ ರೈಲ್ವೆ ಮೈದಾನದಲ್ಲಿ ‘ರಾಬರ್ಟ್’ ಆರ್ಭಟ ಭಾನುವಾರ ಜೋರಾಗಿತ್ತು. ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ, ಹಾಡುಗಳು, ಡೈಲಾಗ್, ಟೀಸರ್​ಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು. ನಾಯಕ ನಟ ದರ್ಶನ ತೂಗುದೀಪ ಅವರನ್ನು ಪ್ರೇಕ್ಷಕರು, ‘ಡಿ ಬಾಸ್’ ಜೈಕಾರದ ಮೂಲಕ ವೇದಿಕೆಗೆ ಸ್ವಾಗತಿಸಿದರು.

ಬಾ..ಬಾ ನಾ ರೆಡಿ, ಜೈ ಶ್ರೀರಾಮ್ ನಿನ್ನ ನೋಡಿ ಸುಮ್ಮನ್ಹೆಂಗಿರಲಿ ಮುಂತಾದ ಹಾಡುಗಳ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ರವಿಶಂಕರ, ವಿನೋದ ಪ್ರಭಾಕರ, ಚಿಕ್ಕಣ್ಣ, ಶರಣ್, ಅಭಿಷೇಕ ಅಂಬರೀಶ ಅವರು ವಿವಿಧ ಡೈಲಾಗ್ ಹೇಳುವ ಮೂಲಕ ಜನರನ್ನು ರಂಜಿಸಿದರು. ಅರ್ಜುನ ಜನ್ಯ, ಹೇಮಂತ ಇತರರ ಗಾಯನ ಜನರ ಮನಸೂರೆಗೊಂಡವು. ಮಾಸ್ಟರ್ ಆನಂದ ಅವರ ನಿರೂಪಣೆ ಪ್ರೇಕ್ಷಕರನ್ನು ಹುರಿದುಂಬಿಸಿತು.

ನಟ ದರ್ಶನ ಮಾತನಾಡಿ, ಮಾ. 11ರಂದು ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ. ನೀವೇ ನನಗೆ ಸೆಲಿಬ್ರಿಟಿ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಕೈ ಮುಗಿದರು.

ಸಚಿವ ಬಿ.ಸಿ. ಪಾಟೀಲ, ದರ್ಶನ ಅವರು ನಮ್ಮ ಕೃಷಿ ಇಲಾಖೆ ರಾಯಭಾರಿ. ನಮ್ಮ ನಾಡಿನ ಹೆಮ್ಮೆಯ ನಟರೂ ಹೌದು ಎಂದು ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಎಂಎಲ್​ಸಿ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಸಚಿವ ರಾಜುಗೌಡ, ನಿರ್ವಪಕ ಉಮಾಪತಿ ಶ್ರೀನಿವಾಸಗೌಡ, ನಿರ್ದೇಶಕ ತರುಣ ಸುಧೀರ, ನಾಯಕ ನಟಿ ಆಶಾ ಭಟ್, ಪೋಷಕ ನಟ ದೇವರಾಜ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net