ಬೋರ್​ವೆಲ್​ ಕೊರೆಸಲು ಕರೆಸಿ ದರೋಡೆ

Published on

ಮುಳಬಾಗಿಲು: ಕೊಳವೆಬಾವಿ ಕೊರೆಯಲು ಸ್ಥಳ ನೋಡಿಕೊಂಡು ಹೋಗಲು ಬಂದ ಬೋರ್​ವೆಲ್​ ಏಜೆನ್ಸಿ ಮಾಲೀಕನನ್ನು ಬೆದರಿಸಿ ದರೋಡೆ ಮಾಡಲಾಗಿದೆ.

ಕೆಜಿಎಫ್​ ತಾಲೂಕಿನ ವಡ್ಡಹಳ್ಳಿಯ ಲಕ್ಷಿ$್ಮನಾರಾಯಣ (52) ದರೋಡೆಗೊಳಗಾದವರು. ಬೇತಮಂಗಲ ಮತ್ತು ಮಳಬಾಗಿಲಿನಲ್ಲಿ ಬೋರ್​ವೆಲ್​ ಏಜೆನ್ಸಿ ತೆರೆದು ಕೊಳೆವೆಬಾವಿ ಕಾರ್ಯನಿರ್ವಹಿಸುತ್ತಿದ್ದರು.

ಟನೆ ಹಿನ್ನೆಲೆ: ತಾಲೂಕಿನ ಆಲಂಗೂರು ಕ್ರಾಸ್​ ಸಮೀಪವಿರುವ ಜಮೀನಿನಲ್ಲಿ ಕೊಳವೆಬಾವಿ ಕೊರೆಸಬೇಕೆಂದು ಮಹಿಳೆ ಒಬ್ಬರು ಲಕ್ಷಿ$್ಮನಾರಾಯಣ ಅವರ ಮೊಬೈಲ್​ಗೆ ಹಲವು ಬಾರಿ ಕರೆ ಮಾಡಿದ್ದರು. ಆದ್ದರಿಂದ ಸ್ಥಳ ನೋಡಿಕೊಂಡು ಬರಲು ಮಂಗಳವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಆದರೆ, ಸ್ಥಳದಲ್ಲಿ ಯಾರೂ ಇಲ್ಲದ್ದನ್ನು ಕಂಡು ಮತ್ತೆ ಮಹಿಳೆಗೆ ಕರೆ ಮಾಡಿ ವಿಚಾರಿಸಿದ್ದು, ಆಕೆ, ನರಸಾಪುರದ ಬಳಿಯ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಅಲ್ಲೇ ಪಕ್ಕದಲ್ಲಿ ನಮ್ಮ ಜಮೀನಿದೆ. ಅಲ್ಲೇ ಇರಿ ಎಂದು ಹೇಳಿದ್ದಾರೆ. ಈ ವೇಳೆಗೆ ಹಿಂದಿನಿಂದ ಬಂದ ವ್ಯಕ್ತಿ ಮುಖಕ್ಕೆ ಬಟ್ಟೆ ಸುತ್ತಿ ಹಲ್ಲೆ ಮಾಡಿದ್ದು, ನಂತರ ಮೂವರು ಮುಖ ಮುಚ್ಚಿಕೊಂಡು ಬಂದು ಥಳಿಸಿ, ನಗದು, ಚಿನ್ನಾಭರಣ ಕಸಿದು, ನಂತರ ಮೊಬೈಲ್​ನಲ್ಲಿದ್ದ ಕಾಲ್​ ಡೀಟೇಲ್ಸ್​ ಅಳಿಸಿ, ಈ ವಿಷಯ ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಜಗದೀಶ್​, ಡಿವೈಎಸ್​ಪಿ ಡಿ.ಸಿ.ನಂದಕುಮಾರ್​, ಮುಳಬಾಗಿಲು ಗ್ರಾಮಾಂತರ ಸಿಪಿಐ ಕೆ.ಜಿ. ಸತೀಶ್​, ನಂಗಲಿ ಠಾಣೆಯ ಪಿಎಸ್​ಐ ಎಲ್​. ಮಮತಾ ಮತ್ತು ಸಿಬ್ಬಂದಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮೊಬೈಲ್​ ಲೊಕೇಷನ್​ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net