ದರೋಡೆ ಪ್ರಕರಣದ ಆರೋಪಿಗೆ ಗುಂಡೇಟು

Robbery case
ಶ್ರೀನಿವಾಸ್ ಅಲಿಯಾಸ್ ಸೀನಾ
Published on

ಶಿವಮೊಗ್ಗ: ತೀರ್ಥಹಳ್ಳಿಯ ಮಹಿಷಿ ಮಠದಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣದ ಆರೋಪಿ ಕಾಲಿಗೆ ಮಾಳೂರು ಠಾಣೆ ಪೊಲೀಸರು ಶಿಕಾರಿಪುರದಲ್ಲಿ ಗುಂಡು ಹಾರಿಸಿ ಬಂಧಿಸಿದ್ದಾರೆ.

ಶಿಕಾರಿಪುರದ ಪ್ರಗತಿ ನಗರದ ನಿವಾಸಿ ಶ್ರೀನಿವಾಸ್ ಅಲಿಯಾಸ್ ಸೀನಾ (25) ಬಂಧಿತ ಆರೋಪಿ. ನಾಲ್ಕೈದು ದಿನಗಳ ಹಿಂದೆ ಮಾಳೂರು ಠಾಣಾ ವ್ಯಾಪ್ತಿಯ ಮಹಿಷಿ ಮಠಕ್ಕೆ ನುಗ್ಗಿದ್ದ ಮುಸುಕುಧಾರಿಗಳು ಅಲ್ಲಿದ್ದವರಿಗೆ ಬೆದರಿಸಿ, ಹಲ್ಲೆ ಮಾಡಿ ದರೋಡೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲು ಶಿಕಾರಿಪುರ ಪಟ್ಟಣದ ಟ್ಯಾಂಕ್ ಬಂಡ್ ಸಮೀಪ ತೆರಳಿದ್ದ ಪೇದೆ ಸಂತೋಷ್ ಮೇಲೆ ಆರೋಪಿ ದಾಳಿಗೆ ಯತ್ನಿಸಿದ್ದ. ಮಾಳೂರು ಠಾಣೆ ಪಿಎಸ್‌ಐ ಕುಮಾರ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಶರಣಾಗಿರಲಿಲ್ಲ. ಆದ್ದರಿಂದ ಪಿಎಸ್‌ಐ ಕುಮಾರ್ ಅವರು ಆರೋಪಿ ಶ್ರೀನಿವಾಸ್ ಎಡಗಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net