26 ಗಂಟೆಯಲ್ಲಿ ದರೋಡೆ ಆರೋಪಿ ಬಂಧನ

Published on

ಮುಳಬಾಗಿಲು: ತಾಲೂಕಿನ ಪುಲಿಪಾಪೇನಹಳ್ಳಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿಂದತೆ ಆರೋಪಿಯನ್ನು 26 ಗಂಟೆಯಲ್ಲಿ ಬಂಧಿಸಿದ ನಂಗಲಿ ಠಾಣೆ ಪೊಲೀಸರು ಚಿನ್ನ ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಕೆ.ಬಿಕ್ಕನಹಳ್ಳಿಯ ಎನ್​.ನಾಗೇಶ್​ (27) ಬಂಧಿತ.

ಪುಲಿಪಾಪೇನಹಳ್ಳಿಯಲ್ಲಿ ಜು.-24 ರಂದು ಮಂಕಿ ಕ್ಯಾಪ್​, ಕಪ್ಪು ಜಾಕೆಟ್​ ಮತ್ತು ನಿಕ್ಕರ್​ ಧರಿಸಿ ಒಂಟಿ ಮನೆಗೆ ಪ್ರವೇಶಿಸಿದ ಆರೋಪಿ ಮನೆ ಮಾಲಕಿ ಕೊರಳಲ್ಲಿದ್ದ 30 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ. ಮಹಿಳೆಯ ಪುತ್ರ ಜು-.25ರಂದು ತಾಯಿಯೊಂದಿಗೆ ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೊಲೀಸ್​ ಅಧೀಕ್ಷ ಬಿ.ನಿಖಿಲ್​ ಮಾರ್ಗದರ್ಶನದಲ್ಲಿ ಅಪರ ಪೊಲೀಸ್​ ಅಧೀಕ್ಷಕರಾದ ರವಿಶಂಕರ್​ ಮತ್ತು ಜಗದೀಶ್​ ಹಾಗೂ ಮುಳಬಾಗಿಲು ಉಪ ವಿಭಾಗದ ಡಿವೈಎಸ್​ಪಿ ಡಿ.ಸಿ.ನಂದಕುಮಾರ್​ ಅವರ ಸಹಕಾರದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಜಿ.ಸತೀಶ್​, ನಂಗಲಿ ಪಿಎಸ್​ಐ ಕುಮಾರಿ, ಮಮತಾ, ನಂಗಲಿ ಠಾಣೆ ಸಿಬ್ಬಂದಿ ಸಂತೋಷ್​ ಕುಮಾರ್​, ಶಿವರಾಜಚಾರಿ, ಜೀಪು ಚಾಲಕ ನಾರಾಯಣಸ್ವಾಮಿ ತಂಡ ಪ್ರಕರಣ ದಾಖಲಾದ ಕೆಲ ಹೊತ್ತಿನಲ್ಲೇ ಕಾರ್ಯಾಚರಣೆಗಿಳಿದು ಗುಪ್ತ ಮಾಹಿತಿದಾರರ ಸಹಕಾರದಿಂದ ಜು-.25ರ ಸಂಜೆ 7ಗಂಟೆಗೆ ಆರೋಪಿಯನ್ನು ಬಂಧಿಸಿ, ಚಿನ್ನ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net